ಕರ್ನಾಟಕ

karnataka

ETV Bharat / bharat

'ಭಾರತೀಯತೆ' ರುಜುವಾತು ಮಾಡಿದ ಸ್ವಾತಂತ್ರ್ಯ ಹೋರಾಟಗಾರನ ಮಗಳು: 3 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ಮುಕ್ತಿ - Bangladeshi illegal immigrants

Freedom fighters daughter proves citizenship: ಬಾಂಗ್ಲಾದ ಅಕ್ರಮ ವಲಸಿಗರು ಎಂಬ ಆರೋಪ ಹೊತ್ತಿದ್ದ ಸ್ವಾತಂತ್ರ್ಯ ಹೋರಾಟಗಾರನ ಮಗಳು ತಾನು ಭಾರತೀಯಳು ಎಂಬುದನ್ನು ರುಜುವಾತು ಮಾಡಿದ್ದಾರೆ. 3 ವರ್ಷಗಳ ಕಾನೂನು ಹೋರಾಟವನ್ನೂ ಅವರು ಜಯಿಸಿದರು.

ಸ್ವಾತಂತ್ರ್ಯ ಹೋರಾಟಗಾರನ ಮಗಳು
ಸ್ವಾತಂತ್ರ್ಯ ಹೋರಾಟಗಾರನ ಮಗಳು

By ETV Bharat Karnataka Team

Published : Nov 26, 2023, 1:08 PM IST

ಗುವಾಹಟಿ(ಅಸ್ಸಾಂ):ಕೆಲವೊಮ್ಮೆ ಅಧಿಕಾರಿಗಳು ಅಥವಾ ವ್ಯವಸ್ಥೆ ಮಾಡುವ ಎಡವಟ್ಟುಗಳು ಹೇಗಿರುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಸ್ವಾತಂತ್ರ್ಯ ಹೋರಾಟಗಾರನ ಮಗಳಾಗಿದ್ದರೂ, ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಸ್ಸಾಂನ ವೃದ್ಧ ಮಹಿಳೆ 3 ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಭಾರತದ ನಾಗರಿಕತ್ವವನ್ನು ಸಾಬೀತುಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ಆಜಾದ್​ ಚಂದ್ರಶೇಖರ್​ ನಿಕಟವರ್ತಿ ದಿಗೇಂದ್ರ ಚಿ.ಘೋಷ್ ಅವರ ಪುತ್ರಿ ಸೇಜೆ ಬಾಲಾ ಘೋಷ್ ವಲಸಿಗ ಆರೋಪದ ವಿರುದ್ಧ ಹೋರಾಡಿದವರು. ಕೊನೆಗೂ ತಾನು 'ಭಾರತೀಯ' ಎಂಬುದಕ್ಕೆ ಹಲವು ದಾಖಲೆಗಳನ್ನು ಸಲ್ಲಿಸಿದ ಬಳಿಕ, ಆಕೆಗೆ ವಿದೇಶಿ ನ್ಯಾಯಮಂಡಳಿ (ಎಫ್​ಟಿ) ನಾಗರಿಕತ್ವದ ಆದೇಶ ಪ್ರತಿ ನೀಡಿದೆ.

ಏನಿದು ನಾಗರಿಕತ್ವ ಹೋರಾಟ?:ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಸಲ್ಬಗಾನ್ ಗ್ರಾಮದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿರುವ ವೃದ್ಧೆ ಸೇಜೆ ಬಾಲಾ ಘೋಷ್ ಸ್ವಾತಂತ್ರ್ಯ ಹೋರಾಟಗಾರನ ಮಗಳು. 2020ರಲ್ಲಿ ಕೊರೊನಾ ಲಾಕ್​ಡೌನ್​ ವೇಳೆ ದೇಶಕ್ಕೆ ಬಾಂಗ್ಲಾದೇಶಿಗರು ಅಕ್ರಮವಾಗಿ ವಲಸೆ ಬಂದಿದ್ದರು. ಸೇಜೆ ಬಾಲಾ ಅವರನ್ನೂ ಅಕ್ರಮ ವಲಸಿಗಳು ಎಂದು ಅಧಿಕಾರಿಗಳು ಶಂಕಿಸಿದ್ದರು. ಇವರ ಗುರುತು ಪತ್ತೆಗಾಗಿ ಪ್ರಶ್ನೆ ಮಾಡಿದ್ದರು. ಅಲ್ಲದೇ, ಕೋರ್ಟ್​ ಮುಂದೆ ಹಾಜರಾಗಲು ಸೂಚಿಸಿದ್ದರು.

ಅಧಿಕಾರಿಗಳ ವಿರುದ್ಧ ಸೇಜೆ ಬಾಲಾ ಅವರು ತಾನು ಭಾರತೀಯಳು, ತನ್ನ ತಂದೆ ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿದರೂ ಯಾರೂ ಒಪ್ಪಿರಲಿಲ್ಲ. ಪುತ್ರನ ಸಾವು, ಬಂಧುಗಳಿಂದ ದೂರವಿರುದ್ಧ ವೃದ್ಧೆಯನ್ನು ನೆರೆಹೊರೆಯವರು ನೋಡಿಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎನ್‌ಜಿಒ ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ವೃದ್ಧೆಗೆ ಕಾನೂನಿನ ನೆರವು ನೀಡಿದರು. ನ್ಯಾಯಾಧಿಕರಣದಲ್ಲಿ ಬಾಲಾ ಘೋಷ್ ಅವರ ಪರವಾಗಿ ವಕೀಲರಾದ ದಿವಾನ್ ಅಬ್ದುರ್ ರಹೀಮ್ ವಾದಿಸಿದರು.

ಹಲವು ದಾಖಲೆಗಳಲ್ಲಿ ರುಜುವಾತು:ಸ್ವಾತಂತ್ರ್ಯ ಹೋರಾಟಗಾರ ದಿಗೇಂದ್ರ ಚಿ. ಅವರು ವೃದ್ಧೆ ಸೆಜೆ ಬಾಲಾ ಅವರು ತಂದೆಯಾಗಿದ್ದಾರೆ. 1947ರಲ್ಲಿ ಆಗಿನ ಪೂರ್ವ ಪಾಕಿಸ್ತಾನದಲ್ಲಿ ನಡೆದ ಧಾರ್ಮಿಕ ಸಂಘರ್ಷದ ವೇಳೆ ಕುಟುಂಬ ಅಸ್ಸಾಂಗೆ ವಲಸೆ ಬಂದಿದೆ. ಸೆಜೆ ಬಾಲಾ ಅವರು 1951ರಲ್ಲಿ ಮಂಗಲ್ಡೊಯ್ ಜಿಲ್ಲೆಯ ಬಲೋಗರ ಗ್ರಾಮದಲ್ಲಿ ಜನಿಸಿದರು. ಅದೇ ವರ್ಷ ನಡೆದ ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ (NRC) ದಿಗೇಂದ್ರ ಅವರ ಹೆಸರಿದೆ. 1954ರಲ್ಲಿ ದಿಗೇಂದ್ರ ಚಿ. ಘೋಷ್ ಅವರು ಪಾಸ್​​ಪೋರ್ಟ್​ ಕೂಡ ಪಡೆದಿದ್ದಾರೆ. 1958 ಮತ್ತು ನಂತರದ ಕೆಲವು ವರ್ಷಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದೆ ಎಂಬ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಲಾಯಿತು.

ಇದನ್ನೆಲ್ಲಾ ಪರಿಶೀಲಿಸಿದ ಬಳಿಕ ನ್ಯಾಯಾಧಿಕರಣ ಸೆಜೆ ಬಾಲಾ ಅವರನ್ನು ಭಾರತೀಯರು ಎಂದು ಒಪ್ಪಿಕೊಂಡಿದೆ. ಬಳಿಕ ಆಕೆಗೆ ನಾಗರಿಕತ್ವದ ಆದೇಶ ನೀಡಿದೆ. ಆದರೆ, ಮೂರು ವರ್ಷಗಳ ಕಾಲ ಅವರನ್ನು ಬಾಂಗ್ಲಾ ಅಕ್ರಮ ವಲಸಿಗರು ಎಂದು ಟೀಕಿಸಿದ್ದು ಘಾಸಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಇದು ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನವಾಗಿದೆ. ನ್ಯಾಯಾಲಯದ ಆದೇಶಕ್ಕಿಂತ, ದೇವರ ನ್ಯಾಯವನ್ನು ತಾವು ನಂಬುವುದಾಗಿ 73 ವರ್ಷದ ಮಹಿಳೆ ಹೇಳಿದರು.

ಇದನ್ನೂ ಓದಿ:ಅಕ್ರಮ ವಲಸೆ ಅನುಮಾನದಡಿ 301 ದಿನ ಸೆರೆವಾಸ; ಪ.ಬಂಗಾಳದ ದಂಪತಿ ಕೊನೆಗೂ ತವರಿಗೆ ವಾಪಸ್

ABOUT THE AUTHOR

...view details