ಕರ್ನಾಟಕ

karnataka

ETV Bharat / bharat

ಚುನಾವಣೆ ಗೆಲ್ಲಲು ಕೈ ಮಹಾಪ್ಲಾನ್​.. ವಿದ್ಯಾರ್ಥಿನಿಗೆ ಸ್ಮಾರ್ಟ್​​​ ಫೋನ್​ ವಿತರಿಸಿದ ರಾಹುಲ್​.. ಏನಿದು ಯೋಜನೆ? - ಸಿಎಂ ಅಶೋಕ್​ ಗೆಹ್ಲೋಟ್​

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದ ಮಂಗರ್​ನಲ್ಲಿ ಬುಧವಾರ ವಿದ್ಯಾರ್ಥಿನಿಯೊಬ್ಬರಿಗೆ ಸ್ಮಾರ್ಟ್‌ಫೋನ್ ನೀಡುವ ಮೂಲಕ ರಾಜ್ಯ ಸರ್ಕಾರದ ಸ್ಮಾರ್ಟ್‌ಫೋನ್ ಯೋಜನೆಯನ್ನು ಉದ್ಘಾಟಿಸಿದರು. ಇಂದು ಸಿಎಂ ಗೆಹ್ಲೋಟ್ ಜೈಪುರದಿಂದ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

free-smartphone-scheme-launch-on-august-10-in-jaipur-know-more-details
ಚುನಾವಣೆ ಗೆಲ್ಲಲು ಕೈ ಮಹಾಪ್ಲಾನ್​.. ವಿದ್ಯಾರ್ಥಿನಿಗೆ ಸ್ಮಾರ್ಟ್​​​ ಫೋನ್​ ವಿತರಿಸಿದ ರಾಹುಲ್​.. ಏನಿದು ಯೋಜನೆ?

By

Published : Aug 10, 2023, 9:26 AM IST

ಜೈಪುರ(ರಾಜಸ್ಥಾನ):ಮತ್ತೆ ಅಧಿಕಾರಕ್ಕೆ ಮರಳಲು ಪ್ಲಾನ್​ ಹಾಕಿರುವ ಸಿಎಂ ಅಶೋಕ್​ ಗೆಹ್ಲೋಟ್​ ಅದಕ್ಕಾಗಿ ಭರ್ಜರಿ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ಇಂದು ಸ್ಮಾರ್ಟ್​ಫೋನ್​ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಯೋಜನೆಗೆ ಚಾಲನೆ ಸಿಗುವ ಮುನ್ನವೇ ಕಾಂಗ್ರೆಸ್​ ನೇತಾರ, ರಾಹುಲ್​ ಗಾಂಧಿ ನಿನ್ನೆ ಮಂಗರ್‌ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಸ್ಮಾರ್ಟ್‌ಫೋನ್ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಚಿರಂಜೀವಿ ಕುಟುಂಬದ ಮಹಿಳಾ ಮುಖ್ಯಸ್ಥರು ಸ್ಮಾರ್ಟ್‌ಫೋನ್‌ಗಳನ್ನು ಪಡೆಯಲಿದ್ದಾರೆ. ಸ್ಮಾರ್ಟ್​ ಫೋನ್​ ಯೋಜನೆ ಅಡಿ ರಾಜ್ಯದ 40 ಲಕ್ಷ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಇವತ್ತೇ ‘ಡಿಜಿಟಲ್ ಸಖಿ ಪುಸ್ತಕ’ವನ್ನ ಬಿಡುಗಡೆ ಆಗಲಿದೆ.

ಈ ಯೋಜನೆಯ ಮಾನದಂಡಗಳೇನು?:ಸ್ಮಾರ್ಟ್‌ಫೋನ್ ಮತ್ತು ಸಿಮ್‌ಗಾಗಿ 6,800 ರೂಗಳನ್ನು ನೇರ ಹಣ ವರ್ಗಾವಣೆ ಡಿಬಿಟಿ ಮೂಲಕ ಇ-ವ್ಯಾಲೆಟ್‌ನಲ್ಲಿ ಠೇವಣಿ ಇಡಲಾಗುತ್ತದೆ. ಇದಲ್ಲದೇ ಸರ್ಕಾರಿ ಶಾಲೆಗಳಲ್ಲಿ 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಗೂ ಸ್ಮಾರ್ಟ್‌ಫೋನ್ ಸಿಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು, ವಿಧವೆ -ಒಂಟಿ ಮಹಿಳಾ ಪಿಂಚಣಿ ಪಡೆಯುವ ವನಿತೆಯರು ಹಾಗೂ 2022-23ರಲ್ಲಿ MNREGA ಯೋಜನೆಯಲ್ಲಿ 100 ಕೆಲಸದ ದಿನಗಳನ್ನು ಪೂರೈಸಿದ ಮಹಿಳಾ ಮುಖ್ಯಸ್ಥರು, 2022-23 ರಲ್ಲಿ ಇಂದಿರಾಗಾಂಧಿ ನಗರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 50 ಕೆಲಸದ ದಿನಗಳನ್ನು ಪೂರ್ಣಗೊಳಿಸಿದ ಮಹಿಳೆಯರ ಕುಟುಂಬದ ಮಹಿಳಾ ಮುಖ್ಯಸ್ಥರು ಈ ಸ್ಮಾರ್ಟ್​ ಫೋನ್​ಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಉಚಿತ ಮೊಬೈಲ್​​ಗಾಗಿ ಬರಲಿದೆ ಸಂದೇಶ:ಸರ್ಕಾರದ ಉಚಿತ ಸ್ಮಾರ್ಟ್​ ಫೋನ್​ ಸೌಲಭ್ಯ ಪಡೆಯಲು, ಅರ್ಹರಿಗೆ ಎಸ್‌ಎಂಎಸ್ ಸಂದೇಶ ರವಾನೆ ಆಗಲಿದೆ. ಸ್ಮಾರ್ಟ್‌ಫೋನ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸರ್ಕಾರ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುತ್ತದೆ. ಇದರ ಜೊತೆ ಅರ್ಹ ಫಲಾನುಭವಿಗಳಿಗೆ ಸ್ಲಿಪ್​ ಕೂಡಾ ನೀಡುತ್ತದೆ. ಈ ಮೂಲಕ ಸ್ಮಾರ್ಟ್​ಫೋನ್​ ವಿತರಣಾ ಶಿಬಿರದ ದಿನಾಂಕ, ಸ್ಥಳ ಮತ್ತು ಅಗತ್ಯ ದಾಖಲೆಗಳ ಮಾಹಿತಿಯನ್ನ ಈ ಸ್ಲಿಪ್​ನಲ್ಲಿ ನೀಡಲಾಗುತ್ತದೆ. ಸ್ಮಾರ್ಟ್​ಫೋನ್​ ಪಡೆಯಲು, ಫಲಾನುಭವಿ ತನ್ನೊಂದಿಗೆ ಮೊಬೈಲ್ ಫೋನ್ ತೆಗೆದುಕೊಂಡು ತೆರಳಬೇಕು. ಆ ಫೋನ್‌ನಲ್ಲಿ ಇ-ವ್ಯಾಲೆಟ್ ಅನ್ನು ಡೌನ್​​​ಲೋಡ್​ ಮಾಡಿ ಇನ್​ಸ್ಟಾಲ್​ ಮಾಡಲಾಗುತ್ತದೆ. ಆ ಬಳಿಕ ಉಚಿತ ಸ್ಮಾರ್ಟ್​ ಫೋನ್​ ಫಲಾನುಭವಿಗಳಿಗೆ ಸಿಗಲಿದೆ.

ಯೋಜನೆಯ ಪ್ರಕ್ರಿಯೆ ಹೇಗಿರಲಿದೆ?: ಸ್ಮಾರ್ಟ್​ ಫೋನ್​ ವಿತರಣಾ ಶಿಬಿರದಲ್ಲಿ ಐಜಿಎಸ್‌ವೈ ಪೋರ್ಟಲ್‌ ಮೂಲಕ ಫಲಾನುಭವಿಯ ಇ-ಕೆವೈಸಿ ಮಾಡಲಾಗುವುದು ಎಂದು ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಉಪ ನಿರ್ದೇಶಕ ರಿತೇಶ್ ಕುಮಾರ್ ಶರ್ಮಾ ಹೇಳಿದ್ದಾರೆ. ಪೋರ್ಟಲ್‌ನಲ್ಲಿ ಆಧಾರ​ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಹಿತಿ ಪರಿಶೀಲಿಸಲಾಗುತ್ತದೆ. ಇದಾದ ನಂತರ ಫಲಾನುಭವಿಯ ಫೋನ್‌ಗೆ ​​ ಇ-ವ್ಯಾಲೆಟ್ ಅಳವಡಿಸಲಾಗುತ್ತದೆ. ಫಲಾನುಭವಿಗಳು ಈ ಫಾರ್ಮ್‌ಗಳೊಂದಿಗೆ ಮೊಬೈಲ್ ಸೇವಾ ಪೂರೈಕೆದಾರ ಕಂಪನಿಯ ಕೌಂಟರ್‌ಗೆ ಹೋಗಿ ಸಿಮ್ ಮತ್ತು ಡೇಟಾ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ನಂತರ ಮೊಬೈಲ್ ಫೋನ್ ಅನ್ನು ನೀಡಲಾಗುತ್ತದೆ. ಫಲಾನುಭವಿಯು ಫಾರ್ಮ್‌ನೊಂದಿಗೆ ಕೊನೆಯ ಕೌಂಟರ್‌ಗೆ ಹೋಗಿ ಅಲ್ಲಿ ಫಾರ್ಮ್‌ನ ಮಾಹಿತಿ ಮತ್ತು ಫಲಾನುಭವಿಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಮೂದಿಸಿ ಮತ್ತು IGSY ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಸರ್ಕಾರ ಫಲಾನುಭವಿಯ ಇ-ವ್ಯಾಲೆಟ್‌ಗೆ ಮೊಬೈಲ್​​ನ 6800 ರೂ. ಹಾಗೂ ಸಿಮ್​ ಕಾರ್ಡ್​​​​​​ಗೆ 6125 ರೂಪಾಯಿಗಳನ್ನು ಮತ್ತು ಇಂಟರ್ನೆಟ್ ಡೇಟಾ ಯೋಜನೆಗೆ 675 ರೂಗಳನ್ನು ಫಲಾನುಭವಿಯ ಇ-ವ್ಯಾಲೆಟ್‌ನಲ್ಲಿ ಠೇವಣಿ ಮಾಡಲಾಗುತ್ತದೆ. ಇದರ ನಂತರ, ಏಪ್ರಿಲ್ 2024 ಮತ್ತು ಏಪ್ರಿಲ್ 2025 ರಲ್ಲಿ ಇಂಟರ್ನೆಟ್‌ಗೆ ರೂ 900 - 900 ಠೇವಣಿ ಇಡಲಾಗುತ್ತದೆ.

ಇದನ್ನು ಓದಿ:ಇಂದು ಕಾಂಗ್ರೆಸ್ ಸಂಸದೀಯ ಸಭೆ; ಅವಿಶ್ವಾಸ ನಿಲುವಳಿ ಬಗ್ಗೆ ತಂತ್ರಗಾರಿಕೆ?

ABOUT THE AUTHOR

...view details