ಕರ್ನಾಟಕ

karnataka

ETV Bharat / bharat

ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲಿರುವ ಯೋಗಿ ಸರ್ಕಾರ - ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಇದಕ್ಕೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ರ ರಾಜಸ್ಥಾನ ಸರ್ಕಾರವು, ರಾಜ್ಯದ ಎಲ್ಲಾ ರಸ್ತೆ ಮಾರ್ಗಗಳಲ್ಲಿ ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ರಕ್ಷಾ ಬಂಧನದ ದಿನದಂದು ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಿತ್ತು..

Raksha Bandhan
ರಕ್ಷಾಬಂಧನ

By

Published : Aug 8, 2021, 3:29 PM IST

ಲಖನೌ(ಉತ್ತರಪ್ರದೇಶ) :ರಾಜಸ್ಥಾನದ ಬಳಿಕ ಉತ್ತರಪ್ರದೇಶ ಸರ್ಕಾರವು ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲು ಮುಂದಾಗಿದೆ. ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯಗಳನ್ನು ನೀಡುವಂತೆ ರಾಜ್ಯ ಸಾರಿಗೆ ಸಂಸ್ಥೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶಿಸಿದ್ದಾರೆ.

"ರಕ್ಷಾಬಂಧನದ ಸಂದರ್ಭದಲ್ಲಿ ಉತ್ತರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಬಸ್​​ಗಳಲ್ಲಿ ಉಚಿತ ಸೇವೆ ಒದಗಿಸಬೇಕು" ಎಂದು ಯೋಗಿ ಆದಿತ್ಯನಾಥ್ ಕಚೇರಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್​ ಮಾಡಿದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ರ ರಾಜಸ್ಥಾನ ಸರ್ಕಾರವು, ರಾಜ್ಯದ ಎಲ್ಲಾ ರಸ್ತೆ ಮಾರ್ಗಗಳಲ್ಲಿ ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ರಕ್ಷಾ ಬಂಧನದ ದಿನದಂದು ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಿತ್ತು.

ಆಗಸ್ಟ್ 22ರಂದು ರಕ್ಷಾಬಂಧನ ಅಥವಾ ರಾಖಿ ಹಬ್ಬವನ್ನು ದೇಶದ ಜನತೆ ಆಚರಿಸಲಿದೆ. ಇದು ಸಹೋದರ ಸಹೋದರಿಯರ ನಡುವಿನ ಶುಭ ಬಂಧವನ್ನು ಆಚರಿಸುವ ದಿನವಾಗಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಇದು ಒಂದಾಗಿದೆ. ಮಹಾಭಾರತದ ಮಹಾಕಾವ್ಯದಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ದ್ರೌಪದಿ ತನ್ನ ಸೀರೆ ಹರಿದು, ಅದನ್ನು ಶ್ರೀಕೃಷ್ಣನ ಮಣಿಕಟ್ಟಿನ ಮೇಲೆ ಕಟ್ಟಿ, ರಕ್ಷಣೆಗಾಗಿ ಆಶೀರ್ವಾದ ಪಡೆದಿದ್ದಳಂತೆ.

ABOUT THE AUTHOR

...view details