ಹೈದರಾಬಾದ್ (ತೆಲಂಗಾಣ):ಹೈದರಾಬಾದ್ನ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ನಿಂದ 14 ಯುವತಿಯರು ಸ್ನಾನಗೃಹದ ಕಿಟಕಿ ಗಾಜುಗಳನ್ನು ತೆಗೆದು ಅಲ್ಲಿಂದ ಪರಾರಿಯಾಗಿದ್ದಾರೆ. ಹೈದರಾಬಾದ್ನ ರಂಗಾರೆಡ್ಡಿ ಜಿಲ್ಲೆಯ ಗಂಡಿಪೇಟ ಮಂಡಲ್ನ ಹೈದರ್ಶಾಕೋಟ್ನಲ್ಲಿರುವ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ನಿಂದ ನಿನ್ನೆ 14 ಯುವತಿಯರು ಪರಾರಿಯಾಗಿದ್ದಾರೆ.
ಈ ಬಗ್ಗೆ ಟ್ರಸ್ಟ್ನ ಮ್ಯಾನೇಜರ್ ರಾಮಕೃಷ್ಣ ಮೂರ್ತಿ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ನಾನಗೃಹದ ಕಿಟಕಿಯ ಗಾಜುಗಳನ್ನು ತೆಗೆದು ಅಲ್ಲಿಂದ ಮಹಿಳೆಯರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೈದರಾಬಾದ್ನ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗುವ ಯುವತಿಯರು ಮತ್ತು ಮಹಿಳೆಯರನ್ನು ಪೊಲೀಸರು ಈ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ಗೆ ಸ್ಥಳಾಂತರಿಸುತ್ತಾರೆ. ಸಂಪೂರ್ಣ ಭದ್ರತೆಯ ನಡುವೆ 18 ಜನರನ್ನು ಇಲ್ಲಿ ಇರಿಸಲಾಗಿತ್ತು.