ಕರ್ನಾಟಕ

karnataka

ETV Bharat / bharat

ಈಜಲು ತೆರಳಿದ ಯುವಕರ ಗುಂಪು ಸಮುದ್ರಪಾಲು.. ಎಲ್ಲಿ ಗೊತ್ತಾ? - four dead in suryalanka beach

ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಗಳಿಗೆ ಕೊಚ್ಚಿಹೋಗಿ ನಾಲ್ವರು ಯುವಕರು ಮೃತ ಪಟ್ಟಿರುವ ಘಟನೆ ನಡೆದಿದೆ.

AP: Four de
ಈಜಲು ತೆರಳಿದ ಯುವಕರ ಗುಂಪು ಸಮುದ್ರಪಾಲು

By

Published : Oct 5, 2022, 4:17 PM IST

ಬಾಪಟ್ಲಾ(ಆಂಧ್ರಪ್ರದೇಶ):ಈಜಲು ಹೋಗಿ ಯುವಕರಗುಪೊಂದು ಸಮುದ್ರ ಪಾಲಾಗಿರುವ ಘಟನೆ ಬಾಪಟ್ಲಾ ಜಿಲ್ಲೆಯ ಸೂರ್ಯಲಂಕಾ ಬೀಚ್​ನಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆ ಆಗಿದ್ದು ಒಬ್ಬರನ್ನ ರಕ್ಷಿಸಲಾಗಿದೆ.

ಒಟ್ಟು ಆರು ಜನರ ಯುವಕರ ಗುಂಪು ದಸರಾ ರಜೆ ಹಿನ್ನೆಲೆ ವಿಜಯವಾಡದಿಂದ ಬಾಪಟ್ಲಾ ಜಿಲ್ಲೆಗೆ ಬಂದಿದ್ದರು. ಈ ವೇಳೆ, ಸೂರ್ಯಲಂಕ ಬೀಚ್​ಗೆ ತೆರಳಿ ಈಜಲು 6 ಜನ ಸಮುದ್ರಕ್ಕಿಳಿದಿದ್ದಾರೆ. ಬಳಿಕ ನೋಡ ನೋಡತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಲು ಆರಂಭಿಸಿದ್ದಾರೆ. ಇದನ್ನ ಕಂಡ ರಕ್ಷಣ ಸಿಬ್ಬಂದಿ ತಕ್ಷಣವೇ ಸಮುದ್ರಕ್ಕೆ ಇಳಿದು 6 ಜನರನ್ನ ರಕ್ಷಣೆ ಮಾಡಲು ಮುಂದಾಗಿದ್ದಾರೆ ಅಷ್ಟರಲ್ಲಾಗಲೇ 5 ಜನ ಅಲೆಗಳಿಗೆ ಕೊಚ್ಚಿಹೋಗಿದ್ದಾರೆ. ಒಬ್ಬ ಯುವಕನನ್ನ ಮಾತ್ರ ರಕ್ಷಣೆ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಎಸ್ಪಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾತನಾಡಿದ್ದಾರೆ. ಯುವಕರು ದಸರಾ ರಜೆ ಹಿನ್ನೆಲೆ ಮದುವೆ ಸಮಾರಂಭದ ಅಡುಗೆ ಕೆಲಸಕ್ಕೆಂದು ಇಲ್ಲಿಗೆ ಬಂದಿದ್ದಾರೆ. ಇನ್ನು ಕೆಲಸವನ್ನು ಮುಗಿಸಿಕೊಂಡು ಸಮುದ್ರ ನೋಡಲು ಬಂದ ಅವರು ಈಜಲು ಸಮುದ್ರಕ್ಕೆ ಇಳಿದಿದ್ದು ಅಲೆಗಳಿಗೆ ಕೊಚ್ಚಿ ಹೋಗಿದ್ದಾರೆ.

ಮೃತರಲ್ಲಿ ಇಬ್ಬರು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮತ್ತಿಬ್ಬರು 9 ಮತ್ತು 10ನೇ ತರಗತಿಯಲ್ಲಿ ಓದುತ್ತಿದ್ದರು. ಕಾಣೆಯಾಗಿರುವ ವ್ಯಕ್ತಿ 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಹಿನ್ನೆಲೆ ಶಾಲೆ ತೊರೆದಿದದ್ದು, ಅಡುಗೆ ಕೆಲಸ ಮಾಡುತ್ತಿದ್ದರು. ಅವರೇ ಇಲ್ಲಿ ಅಡುಗೆ ಕೆಲಸಕ್ಕಾಗಿ ಎಲ್ಲರನ್ನು ಕರೆತಂದಿದ್ದು ಎಂದು ಹೇಳಿದ್ದಾರೆ. ಇನ್ನು ಶವಗಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:ಉಡುಪಿ: ಕೇರಳದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು

ABOUT THE AUTHOR

...view details