ಫತೇಪುರ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಬೈಕ್ನಲ್ಲಿ ಮದುವೆಗೆಂದು ತೆರಳಿದ್ದ ನಾಲ್ವರು ಸಹೋದರರು ಮೃತಪಟ್ಟಿರುವ ಘಟನೆ ದಿಲ್ವಾಲ್ಪುರ ಗ್ರಾಮದಲ್ಲಿ ನಡೆದಿದೆ.
ಕೋರ್ವಾ ಗ್ರಾಮದ ವಿಮಲ್ ಪ್ರಜಾಪತಿ ಮದುವೆ ಮಖದೂಮ್ಪುರನಲ್ಲಿ ನಿಶ್ಚಿಯವಾಗಿತ್ತು. ಗ್ರಾಮದ ಅಜಯ್ ಕುಮಾರ್, ಅಖೀಲೆಶ್ ಕುಮಾರ್, ಸಂದೀಪ್ ಮತ್ತು ಶ್ಯಾಮು ಅಣ್ತಂದಿರು. ನಾಲ್ವರು ಸೇರಿ ಒಂದೇ ಬೈಕ್ನಲ್ಲಿ ಶುಕ್ರವಾರ ರಾತ್ರಿ ಮದುವೆಗೆಂದು ತೆರಳಿದ್ದಾರೆ. 8 ಗಂಟೆ ಸುಮಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಟ್ರಕ್ ಚಾಲಕ ಇವರ ಬೈಕ್ಗೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ನ್ವಾಲರೂ ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.