ನೆಲ್ಲೂರು (ಆಂಧ್ರಪ್ರದೇಶ):ತಂದೆಯಿಂದಲೇ ಮಂತ್ರಾಚಾರಕ್ಕೆ ಒಳಗಾಗಿದ್ದ ನಾಲ್ಕು ವರ್ಷದ ಬಾಲಕಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. ಅವಳಿ ಹೆಣ್ಣು ಮಕ್ಕಳನ್ನು ಹೊಂದಿದ್ದ ವೇಣುಗೋಪಾಲ್ ಎಂಬಾತ ನೆಲ್ಲೂರು ಜಿಲ್ಲೆಯ ಪೆರಾರೆಡ್ಡಿಪಲ್ಲಿ ಗ್ರಾಮದ ತನ್ನ ಮನೆಯಲ್ಲಿ ಬುಧವಾರ ಕೆಲವು ಧಾರ್ಮಿಕ ಕ್ರಿಯೆಗಳನ್ನು ಈಕೆಯ ಮೇಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ತಂದೆ ವೇಣುಗೋಪಾಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ದುಷ್ಟ ಶಕ್ತಿಗಳನ್ನು ದೂರ ಓಡಿಸಲು' ಈ ಆಚರಣೆಗಳನ್ನು ಈತ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆರೋಪಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದನಂತೆ. ಇದರಿಂದ ಪಾರಾಗಲು ವಿಧಿ ವಿಧಾನಗಳ ಭಾಗವಾಗಿ ಮಗಳು ಪುನರ್ವಿಕಾ ಬಾಯಿಗೆ ಕುಂಕುಮದ ಪುಡಿಯನ್ನು ತುಂಬಿಸಿದ್ದಾನೆ. ಇದು ಮಗುವಿನ ಉಸಿರುಗಟ್ಟಿಸಿದೆ. ಇದಾದ ನಂತರ ಆಕೆ ಮೂರ್ಛೆ ಹೋಗಿದ್ದಾಳೆ.