ಜಲೋರ್(ರಾಜಸ್ಥಾನ): ಇಲ್ಲಿನ ಜಲೋರ್ ಜಿಲ್ಲೆಯ ಲಾಚ್ಡಿ ಗ್ರಾಮದಲ್ಲಿ ಬೋರ್ವೆಲ್ಗೆ ಬಿದ್ದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.
ಏನಿದು ಘಟನೆ?
ಗುರುವಾರ ಬೆಳಗ್ಗೆ ನಾಲ್ಕು ವರ್ಷದ ಬಾಲಕ ಅಜಯ್ ಎಂಬಾತ ತನ್ನ ತಂದೆಯ ಒಡೆತನದ ಕೃಷಿ ಭೂಮಿಯಲ್ಲಿ ಆಟವಾಡುತ್ತಿದ್ದು, ಹೊಸದಾಗಿ ತೋಡಿದ ಬೋರ್‌ವೆಲ್‌ನೊಳಗೆ ಬಿದ್ದಿದ್ದಾನೆ. ತಕ್ಷಣ ಓಡಿ ಹೋದ ತಂದೆ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ.
90 ಅಡಿಗಳಿಂದ ಮೇಲೆ ಬಂದ ‘ಮೃತ್ಯುಂಜಯ’ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯ ಆಡಳಿತ, ಪೊಲೀಸ್ ಉನ್ನತ ಅಧಿಕಾರಿಗಳು, ಎನ್‌ಡಿಆರ್‌ಎಫ್ ತಂಡಗಳು ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಸತತ 20 ಗಂಟೆಗಳ ಪರಿಶ್ರಮದ ಬಳಿಕ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು.
ಬೋರ್ವೆಲ್ಗೆ ಬಿದ್ದ ಮಗುವಿನ ಚಲನವಲನ ಪತ್ತೆಹಚ್ಚಲು ಕ್ಯಾಮೆರಾವನ್ನು ಒಳಬಿಡಲಾಗಿದ್ದು, ಹಗ್ಗದ ಮೂಲಕ ನೀರಿನ ಬಾಟಲಿಯನ್ನು ಸಹ ಕಳುಹಿಸಲಾಗಿತ್ತು. ಮಗುವಿನ ಉಸಿರಾಟಕ್ಕೆ ತೊಂದರೆಯಾಗದಂತೆ ಆಕ್ಸಿಜನ್ ಪೈಪ್ ಸಹ ಒದಗಿಸಲಾಗಿತ್ತು.
ಮಗು ಆಸ್ಪತ್ರೆಗೆ ದಾಖಲು
ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.