ತಿರುನೆಲ್ವೇಲಿ (ತಮಿಳುನಾಡು): ತಿರುನಲ್ವೇಲಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಆರು ಮಂದಿ ಕಾರ್ಮಿಕರು ಕ್ವಾರಿಯಲ್ಲಿ ಸಿಲುಕಿಕೊಂಡಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ವಾರಿಯಲ್ಲಿ ಸಿಲುಕಿದ ಕಾರ್ಮಿಕರನ್ನು ಲಾರಿ ಚಾಲಕರಾದ ಸೆಲ್ವ ಕುಮಾರ್, ರಾಜೇಂದ್ರನ್ ಹಾಗೂ ಹಿಟಾಚಿ ನಿರ್ವಾಹಕರಾದ ಸೆಲ್ವಂ, ಮುರುಗನ್ ಮತ್ತು ವಿಜಯ್ ಎಂದು ಗುರುತಿಸಲಾಗಿದೆ.
ಮುನೀರ್ ಪಲ್ಲಂ ಪ್ರದೇಶದಲ್ಲಿನ ಕಲ್ಲುಗಣಿಯಲ್ಲಿ ಬಂಡೆಗಳು ಉರುಳಿ ಸುಮಾರು 300 ಅಡಿ ಆಳದಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಆರಂಭದಲ್ಲಿ ಆರು ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರಲ್ಲಿ ಅಗ್ನಿಶಾಮಕ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಗಳು ಇಬ್ಬರನ್ನು ರಕ್ಷಿಸಿದ್ದಾರೆ ಎಂದು ದಕ್ಷಿಣ ವಲಯ ಇನ್ಸ್‌ಪೆಕ್ಟರ್ ಆಸ್ರಾ ಗಾರ್ಗ್ ತಿಳಿಸಿದರು.