ಬೇರಿನಾಗ್ (ಉತ್ತರಾಖಂಡ):ಕಾರೊಂದು ನೂರು ಅಡಿಯ ಕಂದಕಕ್ಕೆ ಬಿದ್ದು, ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಉತ್ತರಾಖಂಡನ ಪಿತೋರಗಢ ಜಿಲ್ಲೆಯ ಬೇರಿನಾಗ್ ಘಾಟ್ನಲ್ಲಿ ನಡೆದಿದೆ. ಮೃತರು ಕುಟುಂಬದ ಸಮೇತವಾಗಿ ಪೂಜಾ ಕಾರ್ಯಕ್ರಮಕ್ಕೆ ಹೊಗಿ ಮರಳಿ ಬರುತ್ತಿದ್ದರು.
ಇಂದು ಬೆಳಗ್ಗೆ ಚಂದನ್ ಸಿಂಗ್ ಎಂಬುವರ ಕುಟುಂಬಸ್ಥರು ಬಾಸೆದಾ ಗ್ರಾಮದಲ್ಲಿ ಪೂಜೆ ಮುಗಿಸಿ ಕಾರಿನಲ್ಲಿ ಬಾಗೇಶ್ವರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪಾಮ್ತೋಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೂರು ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಇದನ್ನು ಕಂಡ ಇಬ್ಬರು ಯುವಕರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.