ಕರ್ನಾಲ್ (ಹರಿಯಾಣ): ಇಂದು ವಿಶ್ವ ಪರಿಸರ ದಿನ. ಪರಿಸರದ ಬಗ್ಗೆ ಜನತೆಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಕರ್ನಾಲ್ನಲ್ಲಿರುವ ಪರಿಸರ ಪ್ರೇಮಿ ಹರ್ಬಿಲಾಸ್ ಗುಪ್ತಾ ತಮ್ಮ ಮನೆಯನ್ನು ಆಮ್ಲಜನಕದ ಸ್ಥಾವರವನ್ನಾಗಿ ಮಾಡಿದ್ದಾರೆ. ಅವರ ನಿವಾಸದಲ್ಲಿ ಅಂದಾಜು 4 ಸಾವಿರ ಸಸ್ಯಗಳಿದ್ದು, ಹಸಿರಿನ ಸಿರಿಯಂತೆ ಮೇಳೈಸುತ್ತಿದೆ.
ಮನೆಯನ್ನೇ ಆಮ್ಲಜನಕದ ಸ್ಥಾವರವನ್ನಾಗಿ ಮಾಡಿದ ಹರ್ಬಿಲಾಸ್..! ‘ಮರ-ಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ’
ಹರ್ಬಿಲಾಸ್ಗೆ ಚಿಕ್ಕಂದಿನಿಂದಲೂ ಮರ ಗಿಡಗಳೆಂದರೆ ಎಲ್ಲಿಲ್ಲದೆ ಪ್ರೀತಿ. ಅವರ ಮನೆ ಸುತ್ತಲೂ ಗಿಡ ನೆಟ್ಟು ಪೋಷಿಸುವುದೇ ಅವರ ಕಾಯಕವಾಗಿತ್ತು. ಅವರ ಮದುವೆಯ ನಂತರವೂ, ಪತ್ನಿ ಉಮಾ ಗುಪ್ತಾ ಈ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
‘ತೂಗು ಉದ್ಯಾನ ನಿರ್ಮಾಣ’
ಲಾಕ್ಡೌನ್ ಸಮಯದಲ್ಲಿ ದಂಪತಿ ರಸ್ತೆ ಬದಿ ಶೆಡ್ಗಳನ್ನು ನಿರ್ಮಿಸಿ, ತೂಗು ಉದ್ಯಾನಗಳನ್ನು ನಿರ್ಮಿಸಿದ್ದಾರೆ. ಶೆಡ್ಗಳ ಸುತ್ತ ಗಿಡಗಳನ್ನು ನೆಟ್ಟು, ಅಲ್ಲಿ ವಿಶ್ರಾಂತಿ ಪಡೆಯುವವರಿಗೆ ಶುದ್ಧ ಗಾಳಿ ಸಿಗುವಂತೆ ಮಾಡಿದ್ದಾರೆ. ಅಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರು ದಂಪತಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
ಪರಿಸರ ದಿನದ ಉದ್ದೇಶ
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ಜನತೆಗೆ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ:ವಿಶ್ವ ಪರಿಸರ ದಿನ ವಿಶೇಷ : ಪ್ರಕೃತಿ ಸಂರಕ್ಷಣೆಯಲ್ಲಿ ಹಸಿರು ನ್ಯಾಯಪೀಠದ ಕೊಡುಗೆ ಅವಿಸ್ಮರಣೀಯ