ಪಾಟ್ನಾ(ಬಿಹಾರ) :ನವರಾತ್ರಿಯ ಮಹಾಸಪ್ತಮಿ ದಿನ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಹುಡುಗಿಯರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಘಟನೆಯಿಂದಾಗಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
ಸರ್ಮೇರಾ ಪೊಲೀಸ್ ಠಾಣೆಯ ಕಾಜಿಚಕ್ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾಲ್ವರು ಹದಿಹರೆಯದ ಹುಡುಗಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಇವರೆಲ್ಲರೂ ಧನಯನ್ ನದಿಯಲ್ಲಿ ಈಜಲು ತೆರಳಿದ್ದರು. ನದಿಯಲ್ಲಿ ಇಳಿದು ಸ್ನಾನ ಮಾಡ್ತಿದ್ದ ಸಂದರ್ಭದಲ್ಲಿ ಎಲ್ಲರೂ ಆಳವಾದ ಜಾಗಕ್ಕೆ ತೆರಳಿದ್ದರಿಂದ ಮುಳುಗಿ ಸಾವನ್ನಪ್ಪಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.