ಕರ್ನಾಟಕ

karnataka

ETV Bharat / bharat

ಸ್ನಾನಕ್ಕೆ ತೆರಳಿದ್ದ ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳು ನೀರುಪಾಲು - ಪೂರ್ವ ಗೋದಾವರಿ ಅಪರಾಧ ಸುದ್ದಿ

ಸ್ನಾನಕ್ಕೆ ತೆರಳಿದ್ದ ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.

Four students drowned, Four Students drowned in East Godavari, Four students drowned in East Godavari, East Godavari crime news,  ನಾಲ್ವರು ವಿದ್ಯಾರ್ಥಿಗಳು ನೀರುಪಾಲು, ಪೂರ್ವ ಗೋದಾವರಿಯಲ್ಲಿ ನಾಲ್ವರು ವಿದ್ಯಾರ್ಥಿಗಳು ನೀರುಪಾಲು, ಪೂರ್ವ ಗೋದಾವರಿಯಲ್ಲಿ ನಾಲ್ವರು ವಿದ್ಯಾರ್ಥಿಗಳು ನೀರುಪಾಲು ಸುದ್ದಿ, ಪೂರ್ವ ಗೋದಾವರಿ ಅಪರಾಧ ಸುದ್ದಿ,
ಸ್ನಾನಕ್ಕೆ ತೆರಳಿದ್ದ ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳು ನೀರುಪಾಲು

By

Published : Jun 28, 2021, 9:49 AM IST

ಪೂರ್ವ ಗೋದಾವರಿ(ಆಂಧ್ರ ಪ್ರದೇಶ):ಇಲ್ಲಿನ ಪಿ.ಗನ್ನವರಂ ವ್ಯಾಪ್ತಿಯ ಲಂಕಲಗನ್ನವರಂನ ವಶಿಷ್ಠ ಗೋದಾವರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಯರ್ರಂಶೆಟ್ಟಿ ರತ್ನಸಾಗರ್​, ಬಂಡಾರು ನವೀನ್​, ಪಂದಾಲ ಪವನ್​, ಖಂಡವಿಲ್ಲಿ ವಿನಯ್​ ಎಂದು ಗುರುತಿಸಲಾಗಿದೆ.

ಇವರೆಲ್ಲರೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದಾರೆ. ರಾತ್ರಿ 7 ಗಂಟೆಯಾದ್ರೂ ಮಕ್ಕಳು ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಬರಿಗೊಂಡು ಶೋಧ ನಡೆಸಿದ್ದರು.

ವಶಿಷ್ಠ ಗೋದಾವರಿ ನದಿಯ ದಡದ ಬಳಿ ತೆರಳಿ ಹುಡುಕಾಟ ನಡೆಸಿದಾಗ ಮಕ್ಕಳ ಬಟ್ಟೆ, ಚಪ್ಪಲಿ ಮತ್ತು ಎರಡು ಫೋನ್​ಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಸ್ನಾನಕ್ಕೆ ತೆರಳಿ ನೀರುಪಾಲಾಗಿರುವ ಸಂಶಯ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ABOUT THE AUTHOR

...view details