ಮುಂಬೈ :ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲ್ ಮೇಲೆ ಪ್ರತ್ಯೇಕ ತೆರಿಗೆ ಹೊಂದಿದ್ದು, ಅದು ಅದರ ಮೂಲ ಬೆಲೆಗಿಂತ ಹೆಚ್ಚಾಗಿದೆ. ಇದೇ ವೇಳೆ ಮುಂಬೈನಲ್ಲಿ ಪೆಟ್ರೋಲ್ ಚಿಲ್ಲರೆ ದರ 100 ರೂಪಾಯಿ ಗಡಿ ದಾಟಿದೆ.
ಪೆಟ್ರೋಲ್ ಮೂಲ ಬೆಲೆ 35.67 ರೂಪಾಯಿ ಆಗಿದ್ದು, ಉಳಿದ ಮೊತ್ತ ತೆರಿಗೆ, ಹೆಚ್ಚುವರಿ ಶುಲ್ಕ ಮತ್ತು ವಿತರಕರ ಕಮಿಷನ್ ಒಳಗೊಂಡಿರುತ್ತದೆ. ಪೆಟ್ರೋಲ್ನ ಸಾಗಾಣೆ ವೆಚ್ಚ ಮತ್ತು ವ್ಯಾಪಾರಿ ಕಮಿಷನ್ ಸೇರಿಸಿದರೆ ಸುಮಾರು 40 ರೂ.ಯಷ್ಟು ವೆಚ್ಚವಾಗಬಹುದು.
ಲೀಟರ್ ಪೆಟ್ರೋಲ್ ಮೂಲ ಬೆಲೆ 35.67 ರೂಪಾಯಿ. ಕೇಂದ್ರಗಳ ಅಬಕಾರಿ ಸುಂಕ 32.90 ರೂ., ಸಾರಿಗೆ ಶುಲ್ಕ 19 ಪೈಸೆ, ರಾಜ್ಯಗಳ ವ್ಯಾಟ್ 17.88 ರೂ., ರಾಜ್ಯಗಳ ವಿಧಿಸುವ ಹೆಚ್ಚುವರಿ ಶುಲ್ಕ 10.12 ರೂ., ಮಾರಾಟಗಾರರ ಕಮಿಷನ್ 3.76 ರೂ. ಸೇರಿ ಮುಂಬೈನಲ್ಲಿ 100 ರೂಪಾಯಿ ದಾಟಿದೆ.
ನಿತ್ಯ ಬಳಕೆಯ ಪೆಟ್ರೋಲ್ ದರ ನೂರರ ಗಡಿ ದಾಟಿದ್ದು, ಮುಂಬೈನಲ್ಲಿ ಶನಿವಾರ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.