ಕರ್ನಾಟಕ

karnataka

ETV Bharat / bharat

ವಿದ್ಯುತ್ ಶಾಕ್ ಹೊಡೆದು ನಾಲ್ವರು ದುರ್ಮರಣ.. ಇಂಜಿನಿಯರಿಂಗ್ ಕಾಲೇಜ್​​ನಲ್ಲಿ ದುರ್ಘಟನೆ - ಕೋಟಿ ಇಂಜನಿಯರಿಂಗ್​ ಕಾಲೇಜ್

ಪ್ರವೇಶ ದ್ವಾರಕ್ಕೆ ಬಣ್ಣ ಹಚ್ಚುತ್ತಿದ್ದ ಸಂದರ್ಭದಲ್ಲಿ ವಿದ್ಯುತ್​​ ತಗುಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ.

Four persons electrocuted and died
Four persons electrocuted and died

By

Published : Dec 29, 2021, 3:13 PM IST

ಅಮರಾವತಿ(ಮಹಾರಾಷ್ಟ್ರ): ಅಮರಾವತಿಯ ಇಂಜಿನಿಯರಿಂಗ್ ಕಾಲೇಜ್​​ನಲ್ಲಿ ವಿದ್ಯುತ್​​ ಸ್ಪರ್ಶಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತದೇಹಗಳನ್ನ ಈಗಾಗಲೇ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಮರಾವತಿಯ ಸಮೀಪದ ಕಠೋರಾ ಪ್ರದೇಶದಲ್ಲಿರುವ ಕೋಟಿ ಇಂಜನಿಯರಿಂಗ್​ ಕಾಲೇಜ್​​ನ ಪ್ರವೇಶ ದ್ವಾರಕ್ಕೆ ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ಗಡಗೇನಗರ ಪೊಲೀಸರ ತಂಡ ಭೇಟಿ ನೀಡಿ, ಮೃತದೇಹಗಳನ್ನ ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದೆ.

ವಿದ್ಯುತ್ ಶಾಕ್ ಹೊಡೆದು ನಾಲ್ವರು ದುರ್ಮರಣ

ಇದನ್ನೂ ಓದಿರಿ:ಬಾಲಿವುಡ್​​ನಲ್ಲಿ ಕೊರೊನಾ ಸ್ಫೋಟ.. ಅರ್ಜುನ್​ ಕಪೂರ್​, ರಿಯಾ, ಅನ್ಶುಲಾಗೆ ಸೋಂಕು

ಪ್ರವೇಶ ದ್ವಾರಕ್ಕೆ ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್​​ ಶಾಕ್​​ ಹೊಡೆದು ಇವರು ದುರ್ಮರಣಕ್ಕೀಡಾಗಿದ್ದಾರೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details