ಕರ್ನಾಟಕ

karnataka

ETV Bharat / bharat

DRDO Data: ರಕ್ಷಣಾ ರಹಸ್ಯ ಬಹಿರಂಗ ಆರೋಪದಲ್ಲಿ ನಾಲ್ವರ ಉದ್ಯೋಗಿಗಳ ಬಂಧನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನಾಲ್ವರು ಉದ್ಯೋಗಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

four person arrested on charges of leaking DRDO data
DRDO Data: ರಕ್ಷಣಾ ರಹಸ್ಯ ಬಹಿರಂಗ ಆರೋಪದಲ್ಲಿ ನಾಲ್ವರ ಉದ್ಯೋಗಿಗಳ ಬಂಧನ

By

Published : Sep 15, 2021, 6:36 AM IST

ಬಾಲಸೋರ್ (ಒಡಿಶಾ):ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವೊಂದು ರಹಸ್ಯಗಳನ್ನು ವಿದೇಶಿಗರಿಗೆ ರವಾನೆ ಮಾಡಿರುವ ಆರೋಪದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO-Defence Research and Development organization) ಕೆಲಸ ಮಾಡುತ್ತಿರುವ ನಾಲ್ವರು ಗುತ್ತಿಗೆ ನೌಕರರನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ (Official Secret Act) 3, 4 ಮತ್ತು 5ನೇ ಸೆಕ್ಷನ್​ಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿರುವುದು ಮಾತ್ರವಲ್ಲದೇ, ಭಾರತೀಯ ದಂಡ ಸಂಹಿತೆ 120-ಬಿ, 121-ಎ, ಮತ್ತು 34 ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಗಂಭೀರ ಹಾನಿಯನ್ನುಂಟು ಮಾಡುವ ಆರೋಪ ಆರೋಪಿಗಳ ಮೇಲಿದೆ. ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಬಾಲಸೋರ್ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣವೊಂದನ್ನು ಈ ಹಿಂದೆ ಚಂಡಿಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಒಡಿಶಾದ ಕ್ರೈಂ ಬ್ರಾಂಚ್ ಈ ಪ್ರಕರಣವನ್ನು ತನಿಖೆ ಮಾಡಿತ್ತು. ಆಗ ಆರೋಪಿಗಳಿಗೆ ಶಿಕ್ಷೆಯೂ ಆಗಿತ್ತು.

ಇದನ್ನೂ ಓದಿ:ಮಕ್ಕಳಿಗೆ ಕೋವಿಡ್​ ಲಸಿಕೆ: ವೈದ್ಯಕೀಯ ಅಧಿಕಾರಿಗಳ ಮಹತ್ವದ ನಿರ್ಧಾರ

ABOUT THE AUTHOR

...view details