ಕರ್ನಾಟಕ

karnataka

ETV Bharat / bharat

ತಂದೆ, ತಾಯಿ, ಸಹೋದರಿ, ಅಜ್ಜಿಯನ್ನು ಬರ್ಬರವಾಗಿ ಇರಿದು ಕೊಂದ ಪುತ್ರ! - ಕೊಲೆ ಪ್ರಕರಣ

ನೈಋತ್ಯ ದೆಹಲಿಯ ಪಾಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ಧಾರೆ.

delhi crime news
ಸಾಂದರ್ಭಿಕ ಚಿತ್ರ

By

Published : Nov 23, 2022, 10:05 AM IST

ನವ ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಪುತ್ರನೇ ಹತ್ಯೆ ಮಾಡಿದ್ದಾನೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕೇಶವ ಬಂಧಿತ ಆರೋಪಿ. ದಿನೇಶ್ ಕುಮಾರ್ (42) ಆರೋಪಿಯ ತಂದೆ, ದೇವನೋ ದೇವಿ-ಅಜ್ಜಿ, ತಾಯಿ ದರ್ಶನ್ ಸೈನಿ (40) ಹಾಗೂ ಸಹೋದರಿ ಊರ್ವಶಿ (22) ಮೃತರು. ಪ್ರಾಥಮಿಕ ಮಾಹಿತಿ ಪ್ರಕಾರ, ಮಾದಕ ವ್ಯಸನಿಯಾಗಿರುವ ಆರೋಪಿ ಮನೆಯಲ್ಲಿದ್ದ ತನ್ನ ತಾಯಿ, ತಂದೆ, ಸಹೋದರಿ ಹಾಗೂ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಆರೋಪಿ ಜತೆಗೆ ಆತನ ಸಂಬಂಧಿಕರು ಮತ್ತು ನೆರೆಹೊರೆಯವರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!

ABOUT THE AUTHOR

...view details