ನಾಂದೇಡ್(ಮಹಾರಾಷ್ಟ್ರ):ನಾಂದೇಡ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಒಕ್ಕಣೆ ಯಂತ್ರದ ಮೇಲೆ ಕುಳಿತಿದ್ದಾಗ ಸಿಡಿಲು ಬಡಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸುನೀಲ್ ಸಾಹೇಬರಾವ್ ವೈಕೋಲೆ (36), ಮಾಧವ್ ಪಿರಾಜಿ ದುಬುಕ್ವಾಡ್ (45), ಪೋಚಿರಾಮ್ ಶ್ಯಾಮರಾವ್ ಗಾಯಕವಾಡ್ (46) ಮತ್ತು ರೂಪಾಲಿ ಪೋಚಿರಾಮ್ ಗಾಯಕವಾಡ (10) ಮೃತರು.
ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರದ ಮುನ್ಸೂಚನೆಯ ಪ್ರಕಾರ, ಮುಂದಿನ ಮೂರು ದಿನಗಳವರೆಗೆ ಔರಂಗಾಬಾದ್, ಬೀಡ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ನಾಂದೇಡ್ ಜಿಲ್ಲೆಯಲ್ಲಿ ಜೂನ್ ಮತ್ತು ಅಕ್ಟೋಬರ್ 14 ರ ನಡುವೆ ಸಿಡಿಲು ಬಡಿದು 14 ಜನರು ಸಾವನ್ನಪ್ಪಿದ್ದು, 11 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಶ್ವೇತಭವನದ ಮುಂದೆ ಸಿಡಿಲಿಗೆ ಮೂವರು ಬಲಿ, ಮನೆಗೆ ಬೆಂಕಿ ಬಿದ್ದು 10 ಮಂದಿ ಸಜೀವ ದಹನ