ಟೊಂಕ್: ನಿನ್ನೆ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೈಪುರ ಮತ್ತು ಕೋಟ ಹೆದ್ದಾರಿಯ ಸರೋಲಿ ಮೊರ್ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕಳುಹಿಸಲಾಗಿದೆ.
ಭೀಕರ ರಸ್ತೆ ಅಪಘಾತ.. ಒಂದೇ ಗ್ರಾಮದ ನ್ವಾಲರು ಯುವಕರು ಸ್ಥಳದಲ್ಲೇ ಸಾವು! - ರಸ್ತೆ ಅಪಘಾತದಲ್ಲಿ ನ್ವಾಲರು ಯುವಕರು ಸ್ಥಳದಲ್ಲೇ ಸಾವು
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಗ್ರಾಮದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಟೊಂಕ್ನಲ್ಲಿ ನಡೆದಿದೆ.
ಐವರು ಶುಕ್ರವಾರ ರಾತ್ರಿ ಕಾರಿನ ಮೂಲಕ ಉದಯಪುರಕ್ಕೆ ತೆರಳುತ್ತಿದ್ದರು. ತಡರಾತ್ರಿ ಒಂದು ಗಂಟೆಯ ಸುಮಾರಿಗೆ, ಸರೋಲಿ ಮೊರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ವಯಸ್ಸು ಸುಮಾರು 20 ರಿಂದ 22 ವರ್ಷಗಳ ನಡುವೆ ಇದ್ದು, ಹೇಮಂತ್, ದಿವಾಕರ್, ಅರಿಹಂತ್ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗುಲ್ಶನ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇವರೆಲ್ಲರೂ ಭರತ್ ಪುರ್ ಜಿಲ್ಲೆಯ ಕಮಾಂ ನಿವಾಸಿಗಳಾಗಿದ್ದಾರೆ ಎಂದು ಘಡ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಭನ್ವರ್ ಲಾಲ್ ಮೀನಾ ಹೇಳಿದ್ದಾರೆ.
ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರ ಸಹಾಯದಿಂದ ಕಾರಿನಲ್ಲಿದ್ದವರನ್ನು ಹೊರತೆಗೆದರು. ಇಡೀ ಕಾರು ಛಿದ್ರಗೊಂಡಿದ್ದು, ಸತ್ತವರ ದೇಹಗಳು ಅದರಲ್ಲಿ ಸಿಲುಕಿಕೊಂಡಿವೆ. ಸ್ಥಳೀಯರ ಸಹಾಯದಿಂದ ನಾಲ್ವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.