ಜಾರ್ಖಂಡ್:ಇಲ್ಲಿನಬರ್ಕಕಾನಾದಲ್ಲಿ ದುರ್ಗಾಪೂಜೆಯ ನಿಮಿತ್ತ ರಾವಣ ದಹನ ಸಮಾರಂಭ ನೋಡಲು ಬೈಕ್ನಲ್ಲಿ ತೆರಳುತ್ತಿದ್ದ ನಾಲ್ವರು ರಾಮಗಢದ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಈ ವೇಳೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಬರ್ಕಾಕಾನಾದಲ್ಲಿನ ದುರ್ಗಾಪೂಜೆಗೆ ಹಾಗೂ ಜಾತ್ರೆಗೆ ಸಾಕಷ್ಟು ಜನ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಬೈಕ್ ಸ್ಕ್ವಿಡ್ ಆಗಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.