ಕರ್ನಾಟಕ

karnataka

ETV Bharat / bharat

ಬಿಹಾರ : ಹೊಗೆಯಲ್ಲಿ ಉಸಿರುಗಟ್ಟಿ ನಾಲ್ವರು ಸಾವು - ಬಿಹಾರದಲ್ಲಿ ಉಸಿರುಗಟ್ಟಿ ನಾಲ್ವರು ಸಾವು

ಗಯಾ ಜಿಲ್ಲೆಯ ಮಾಲ್ತಿ ಗ್ರಾಮದ ಮನೆಯೊಂದರ 4 ಮಂದಿ ಹೊಗೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ..

four people died due to suffocation in Bihar
ಹೊಗೆಯಲ್ಲಿ ಉಸಿರುಗಟ್ಟಿ ನಾಲ್ವರು ಸಾವು

By

Published : Jan 21, 2022, 3:53 PM IST

Updated : Jan 21, 2022, 4:01 PM IST

ಗಯಾ (ಬಿಹಾರ) :ಬಿಹಾರದ ಗಯಾ ಜಿಲ್ಲೆಯ ಮಾಲ್ತಿ ಗ್ರಾಮದ ಮನೆಯೊಂದರ 4 ಮಂದಿ ಹೊಗೆಯಲ್ಲಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ.

ಹೊಗೆಯಲ್ಲಿ ಉಸಿರುಗಟ್ಟಿ ನಾಲ್ವರು ಸಾವು

ಮಾಹಿತಿ ಪ್ರಕಾರ 35 ವರ್ಷದ ವಿಭಾ ದೇವಿ(ತಾಯಿ), 10 ವರ್ಷದ ಸಿಮ್ರನ್ ಕುಮಾರಿ(ಮಗಳು), 8 ವರ್ಷದ ಆರ್ಯನ್ ಕುಮಾರ್(ಮಗ) ಮತ್ತು 4 ವರ್ಷದ ಅಂಕಿತಾ ಕುಮಾರಿ(ಮಗಳು) ಸಾವನ್ನಪ್ಪಿದ್ದಾರೆ.

ಗ್ರಾಮಸ್ಥರ ಪ್ರಕಾರ, ಸಾವನ್ನಪ್ಪಿದ ಮನೆಯವರು ಚಳಿಯಿಂದ ತಪ್ಪಿಸಿಸಿಕೊಳ್ಳಲು, ಶಾಖ ಪಡೆಯುವ ಸಲುವಾಗಿ ಮನೆಯೊಳಗೆ ಹೊಗೆ ಹಾಕಿ ಮಲಗುತ್ತಿದ್ದರು.

ಆದ್ರೆ, ತೀವ್ರಗೊಂಡ ಹೊಗೆಯಲ್ಲಿ ನಾಲ್ವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:Watch-ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಕೊಠಡಿಯಲ್ಲಿ 5 ಅಡಿ ಉದ್ದದ ಹಾವು!

ಇಂದು ಬೆಳಗ್ಗೆ ಬಹಳ ಹೊತ್ತಾದರೂ ಮನೆಯ ಬಾಗಿಲು ತೆರೆಯದೇ ಇದ್ದಾಗ ಗ್ರಾಮಸ್ಥರಿಗೆ ಅನುಮಾನ ಬಂದು, ಬಾಗಿಲು ಒಡೆದು ನೋಡಿದಾಗ ನಾಲ್ವರೂ ಮೃತಪಟ್ಟಿರುವುದು ಕಂಡು ಬಂದಿದೆ.

ಘಟನೆ ಕುರಿತು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ..

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 4:01 PM IST

ABOUT THE AUTHOR

...view details