ಸೆರೈಕೆಲಾ: ಜಾರ್ಖಂಡ್‌ನ ಸೆರೈಕೆಲಾ ಜಿಲ್ಲೆ ಹಳಿ ದಾಟುತ್ತಿದ್ದವರ ಮೇಲೆ ಉತ್ಕಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಎಲ್ಲರೂ ರೈಲು ಹಳಿ ದಾಟುತ್ತಿದ್ದರು. ಈ ವೇಳೆ ರೈಲು ಇವರಿಗೆ ಡಿಕ್ಕಿ ಹೊಡೆದಿದೆ. ಗುರುವಾರ ರಾತ್ರಿ ಗಮ್ಹಾರಿಯಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ ಪ್ರಕಾರ, ನವದೆಹಲಿ ಪುರಿ ಉತ್ಕಲ್ ಎಕ್ಸ್‌ಪ್ರೆಸ್ ಟಾಟಾನಗರ ನಿಲ್ದಾಣಕ್ಕೆ ಹೋಗುತ್ತಿತ್ತು, ಈ ಮಧ್ಯೆ ಗಮ್ಹಾರಿಯಾ ರೈಲು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದಾಗಿ, ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲಿಗೆ ಸಿಲುಕಿ ಇವರೆಲ್ಲ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಮೃತದೇಹಗಳೆಲ್ಲ ರೈಲು ಹಳಿ ಮೇಲೆ ಬಿದ್ದಿದ್ದವು.