ತ್ರಿಶೂರ್(ಕೇರಳ) : ಕುಟುಂಬದ ನಾಲ್ವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತ್ರಿಶೂರ್ನಲ್ಲಿ ಸಂಭವಿಸಿದೆ. ಆಶಿಫ್ (41) ಐಟಿ ಉದ್ಯೋಗಿ, ಪತ್ನಿ ಅಬೀರಾ (38), ಮಕ್ಕಳಾದ ಅಜ್ರಾ ಫಾತಿಮಾ (14), ಐನುನ್ನೀಸಾ (7) ಕೊಠಡಿಯೊಳಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಈ ನಾಲ್ವರು ಸಾವಿಗೀಡಾಗಿದ್ದಕ್ಕೆ ಕಾರ್ಬನ್ ಮೊನಾಕ್ಸೈಡ್ ಅನಿಲ ಕಾರಣ ಎಂದು ಶಂಕಿಸಲಾಗಿದೆ. ಆದರೂ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿ ದೂರು ದಾಖಲಿಸಿಕೊಂಡಿದ್ದಾರೆ.