ಗಡ್ಚಿರೋಲಿ(ಮಹಾರಾಷ್ಟ್ರ):ಇಲ್ಲಿನ ಗಡ್ಚಿರೋಲಿ(gadchiroli encounter) ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿರುವ ಎನ್ಕೌಂಟರ್ನಲ್ಲಿ 26 ಕೆಂಪು ಉಗ್ರರು ಹತರಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಹಾಗೂ ಸಿ-60 ಘಟಕ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 26 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಎನ್ಕೌಂಟರ್ ವೇಳೆ ಮೂವರು ಯೋಧರು ಗಾಯಗೊಂಡಿದ್ದಾಗಿ ಗಡ್ಚಿರೋಲಿ ಎಸ್ಪಿ ಅಂಕಿತ್ ಗೋಯೆಲ್(Gadchiroli SP Ankit Goel) ತಿಳಿಸಿದ್ದಾರೆ.
ಗಡ್ಚಿರೋಲಿ(Gadchiroli) ಜಿಲ್ಲೆಯ ಗ್ಯಾರಹ್ಬತ್ತಿ ಅರಣ್ಯ ವಲಯದ ಧನೋರಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರ ನೀಡಿರುವ ಪೊಲೀಸರು 26 ನಕ್ಸಲರನ್ನು ಬೇಟೆಯಾಡಿದ್ದಾರೆ.