ಬೆಳ್ಳಂಬೆಳಗ್ಗೆ ಗುಂಡಿನ ಚಕಮಕಿ: ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ - Kashmir Encounter
09:00 November 19
07:42 November 19
ಕಾಶ್ಮೀರದ ನಾಗ್ರೋಟಾದಲ್ಲಿ ಬೆಳ್ಳಂಬೆಳಗ್ಗೆ ನಾಲ್ವರು ಭಯೋತ್ಪಾದಕರನ್ನು ಯೋಧರು ಸದೆಬಡಿದಿದ್ದಾರೆ. ಉಗ್ರರ ಬೇಟೆಗೆ ಎನ್ಕೌಂಟರ್ ಮುಂದುವರೆದಿದೆ.
ಜಮ್ಮು: ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿಷೇಧಿತ ಪ್ರದೇಶ ನಾಗ್ರೋಟಾದ ಟೋಲ್ ಪ್ಲಾಜಾ ಬಳಿ ಬೆಳಗ್ಗೆ 5 ಗಂಟೆ ಸುಮಾರಿಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, 4 ಉಗ್ರರನ್ನು ಸೇನೆ ಸದೆಬಡಿದಿದೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ಕೆಲವು ಭಯೋತ್ಪಾದಕರು ನಾಗ್ರೋಟಾದ ಟೋಲ್ ಪ್ಲಾಜಾ ಬಳಿ ಇದ್ದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಅವರು ವಾಹನದಲ್ಲಿ ಅಡಗಿ ಕುಳಿತಿದ್ದರು ಎಂದು ಜಮ್ಮು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್‌ಎಸ್‌ಪಿ ಶ್ರೀಧರ್ ಪಾಟೀಲ್ ತಿಳಿಸಿದರು.
ಸಿಆರ್ಪಿಎಫ್ ವಕ್ತಾರ ಶಿವನಂದನ್ ಸಿಂಗ್ ಮಾತನಾಡಿ, ಜನವರಿ 31 ರಂದು ಬಾನ್ ಟೋಲ್ ಪ್ಲಾಜಾದಲ್ಲಿ ಪೊಲೀಸ್ ಮತ್ತು ಸಿಆರ್ಪಿಎಫ್ ಜಂಟಿ ಪಾರ್ಟಿಯಲ್ಲಿ ಭಯೋತ್ಪಾದಕರ ಗುಂಪೊಂದು ಗುಂಡು ಹಾರಿಸಿದ ಘಟನೆಯನ್ನು ನೆನಪಿಸಿಕೊಂಡರು. ಅವರು ಬಹುಶಃ ವಾಹನದಲ್ಲಿ ಬಂದಿದ್ದರು ಎಂದು ಹೇಳಿದರು.
ಸದ್ಯ ನಾಲ್ವರು ಉಗ್ರರನ್ನು ಸೈನಿಕರು ಬೇಟೆಯಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.