ಸಿದ್ದಿಪೇಟ್, ತೆಲಂಗಾಣ:ಮಾಂಸಕ್ಕಾಗಿ ಎಮ್ಮೆಗಳ ಕಾಲಿನ ಭಾಗವನ್ನೇ ಕತ್ತರಿಸಿಕೊಂಡು ಹೋಗಿದ್ದ ನಾಲ್ವರಲ್ಲಿ ಓರ್ವವನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದ ಸಿದ್ಧಿಪೇಟ್ ಜಿಲ್ಲೆಯ ಕೊಂಡಪಾಕ ಮಂಡಲಕ್ಕೆ ಸೇರಿದ ಸಿರಿಸಿನಗಂಡ್ಲ ಶಿವಾರು ಎಂಬ ಗ್ರಾಮದಲ್ಲಿ ನಡೆದಿದೆ.
ಸಿರಿಸಿನಗಂಡ್ಲ ಮತ್ತು ದಮ್ಮಕಪಲ್ಲಿ ಎಂಬ ಗ್ರಾಮದ ನಡುವೆ ಇರುವ ರಾಜೇಂದರ್ ರೆಡ್ಡಿ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಕೆಲಸ ಮಾಡುವ ನೇಪಾಳದ ಓರ್ವ ಯುವಕ ಮತ್ತು ಆಂಧ್ರಕ್ಕೆ ಸೇರಿದ ಮೂವರು ಯುವಕರು ಈ ಕುಕೃತ್ಯ ನಡೆಸಿದ್ದಾರೆ.
ರಾಜಗಿರಿ ವೆಂಕಟೇಶಂ ಎಂಬ ರೈತ ಶುಕ್ರವಾರ ರಾತ್ರಿ ಹೊಲದಲ್ಲಿದ್ದ ಎಮ್ಮೆಯಿಂದ ಹಾಲು ಕರೆದುಕೊಂಡು ಮನೆಗೆ ತೆರಳಿದ್ದ. ರಾತ್ರಿ ಬಂದ ನಾಲ್ಕು ಮಂದಿ ಯುವಕರು ಮಾಂಸಕ್ಕಾಗಿ ಎರಡು ಎಮ್ಮೆಗಳ ಕಾಲಿನ ತೊಡೆಯ ಭಾಗವನ್ನು ಮಾಂಸಕ್ಕಾಗಿ ಕತ್ತರಿಸಿಕೊಂಡು ಹೋಗಿದ್ದಾರೆ.