ಕರ್ನಾಟಕ

karnataka

ETV Bharat / bharat

ಕೆಲಸ ಕೊಡಿಸುವ ನೆಪದಲ್ಲಿ 22ರ ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ - ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ

ಅಸ್ಸೋಂನಿಂದ ಚುರುಗೆ ಬಂದಿದ್ದ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ದೈಹಿಕವಾಗಿ ಚಿತ್ರಹಿಂಸೆ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Assam girl gang raped in churu
Assam girl gang raped in churu

By

Published : Feb 13, 2022, 3:26 AM IST

ಚುರು(ರಾಜಸ್ಥಾನ):ಕೆಲಸ ಕೊಡಿಸುವ ನೆಪದಲ್ಲಿ ನಾಲ್ವರು ಕಾಮುಕರು 22 ವರ್ಷದ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಕೃತ್ಯ ರಾಜಸ್ಥಾನದ ಚುರುದಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಸ್ಸೋಂ ಮೂಲಕ ಯುವತಿಯನ್ನ ಸುನಿಲ್​ ರಾಜಸ್ಥಾನದ ಚುರುಗೆ ಕರೆತಂದಿದ್ದನು. ಆತನ ಮಾತು ನಂಬಿ ಕೆಲಸ ಸಿಗುವ ಭರವಸೆಯಿಂದ ಯುವತಿ ಇಲ್ಲಿಗೆ ಆಗಮಿಸಿದ್ದಳು. ನಗರಕ್ಕೆ ಬರುತ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ದುಷ್ಕೃತ್ಯವೆಸಗಿದ ನಂತರ ಸಂತ್ರಸ್ತೆಗೆ ದೈಹಿಕವಾಗಿ ಕಿರುಕುಳ ನೀಡಿದ್ದಾರೆ.

ಮದ್ಯದ ಅಮಲಿನಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಕೈಗಳನ್ನ ಕಟ್ಟಿ ಹಾಕಿ, ಬಿಲ್ಡಿಂಗ್​​ನಿಂದ ಕೆಳಗೆ ಎಸೆದಿದ್ದಾರೆ. ಅದೃಷ್ಟವಶಾತ್​ ಕೈಗೆ ಕಟ್ಟಿದ್ದ ಹಗ್ಗ ಕಟ್ಟಡದ ಕಂಬಕ್ಕೆ ಸಿಲುಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇದನ್ನೂ ಓದಿರಿ:ಐಪಿಎಲ್ ಮೆಗಾ ಹರಾಜು: ಯಾವ ತಂಡಕ್ಕೆ ಯಾವ ಪ್ಲೇಯರ್​... ಇಲ್ಲಿದೆ ಸಂಪೂರ್ಣ ಲಿಸ್ಟ್​

ಕಟ್ಟಡದಲ್ಲಿ ತುಂಬಾ ಹೊತ್ತು ನೇತಾಡುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಆಕೆಯ ರಕ್ಷಣೆ ಮಾಡಿ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

ABOUT THE AUTHOR

...view details