ತಿರುವನಂತಪುರಂ: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿರುವನಂತಪುರಂನ ಪೆರಿಂಗಮ್ಮಳದಲ್ಲಿ ನಡೆದಿದೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಾತ್ರಿ ಕುಟುಂಬದವರು ಊಟದಲ್ಲಿ ವಿಷ ಬೆರೆಸಿ ಸೇವಿಸಿದ್ದಾರೆ ಎನ್ನಲಾಗಿದೆ. ಮೃತರನ್ನು ಪುಳಿಂಗಡಿಯ ಅಭಿರಾಮಿ ಜ್ಯುವೆಲ್ಲರಿ ಮಾಲೀಕ ಶಿವರಾಜನ್ (56) ಮತ್ತು ಅವರ ಪುತ್ರಿ ಅಭಿರಾಮಿ (22) ಎಂದು ಗುರುತಿಸಲಾಗಿದೆ. ಅವರ ಪತ್ನಿ ಬಿಂಧು ಮತ್ತು ಪುತ್ರ ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಂಧು ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕುಟುಂಬದೊಂದಿಗೆ ವಾಸವಿದ್ದ ಶಿವರಾಜನ ತಾಯಿ ಶುಕ್ರವಾರ ಬೆಳಗ್ಗೆ ಮಗನನ್ನು ಎಬ್ಬಿಸಲು ಯತ್ನಿಸಿದ್ದು, ಏಳದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ. ಮಗ ಎಚ್ಚರಗೊಳ್ಳದ ಕಾರಣ, ಶಿವರಾಜನ್ ಅವರು ತಾಯಿ ಅವರ ಮೊಮ್ಮಗ ದೈಹಿಕವಾಗಿ ಅಸ್ವಸ್ಥವಾಗಿರುವ ಅರ್ಜುನ್ ಬಳಿ ಹೋಗಿ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ವಿಜಿಂಜಂ ಪೊಲೀಸರಿಗೆ ತಕ್ಷಣವೇ ಕರೆ ಮಾಡಿ ಮನೆಯವರು ವಿಷ ಸೇವಿಸಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಶಿವರಾಜನ್ ಮತ್ತು ಮಗಳು ಅಭಿರಾಮಿ ಮೃತಪಟ್ಟಿರುವುದು ದೃಢಪಟ್ಟಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಾಲದ ಕಾರಣದಿಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ತಿಳಿದು ಬಂದಿದೆ. ಕೆಎಸ್‌ಎಫ್‌ಇ ಸಂಸ್ಥೆಯಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡದೇ ವಿಫಲರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿವರಾಜನ್ ಅವರು ವಿಜಿಂಜಂನ ಪುಲಿಂಗುಡಿ ಜಂಕ್ಷನ್‌ನಲ್ಲಿ ಆಭರಣ ಮಳಿಗೆ ನಡೆಸುತ್ತಿದ್ದರು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಸಾಲದ ಬಾಧೆಗೆ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ:ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿ ಅದನ್ನು ಹಿಂತಿರುಗಿಸಲಾಗದೇ ತಮ್ಮ ಇಬ್ಬರು ಮಕ್ಕಳು ಕೊಂದು ತಂರ ದಂಪತಿ ಇಬ್ಬರೂ ಕೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ಬೋಪಾಲ್ನ ರಾತಿಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಪತಿ ಭೂಪೇಂದ್ರ ವಿಶ್ವಕರ್ಮ ಹಾಗೂ ಪತ್ನಿ ರಿತು ವಿಶ್ವಕರ್ಮ ಅವರು ಮೃತದೇಹ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು, ಅವರ ಇಬ್ಬರು ಮಕ್ಕಳ ಮೃತದೇಹ ಅದೇ ಮನೆಯ ಬೆಡ್ ರೂಂನಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಕುಟುಂಬದ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದ ಭೂಪೇಂದ್ರ, ಫೋಟೋದ ಜೊತೆಗೆ ತಾವು ಬರೆದಿದ್ದ ನಾಲ್ಕು ಪುಟದ ಸೂಸೈಡ್ ನೋಟ್ ಅನ್ನು ತಮ್ಮ ಸೊಸೆಗೆ ವಾಟ್ಸ್ಆ್ಯಪ್ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ:Family suicide: ಬದುಕಿಗೆ ಮುಳುವಾದ ಸಾಲ.. ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ