ಕರ್ನಾಟಕ

karnataka

ETV Bharat / bharat

ಹಳ್ಳಿ ಹಳ್ಳಿಗೂ ಹರಡಿತು ಕೊರೊನಾ..5 ದಿನದಲ್ಲಿ 4 ಲಕ್ಷಕ್ಕೂ ಅಧಿಕ ಶಂಕಿತ ಸೋಂಕಿತರು ಪತ್ತೆ? - corona death

ಮೇ.5ರಿಂದ ರಾಜ್ಯದಲ್ಲಿ ವಿಶೇಷ ಅಭಿಯಾನ ನಡೆಸಲಾಗಿದ್ದು, ಅದರಲ್ಲಿ ಕೆಮ್ಮು, ಶೀತ ಮತ್ತು ಜ್ವರ ಇತರ ಅನುಮಾನಾಸ್ಪದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಪತ್ತೆಮಾಡಲಾಗಿದೆ. ವರದಿಯಲ್ಲಿ 4 ಲಕ್ಷಕ್ಕೂ ಅಧಿಕ ಜನರಲ್ಲಿ ಈ ಲಕ್ಷಣ ಕಂಡುಬಂದಿದೆ.

ಹಳ್ಳಿ ಹಳ್ಳಿಗೂ ಹರಡಿತು ಕೊರೊನಾ
ಹಳ್ಳಿ ಹಳ್ಳಿಗೂ ಹರಡಿತು ಕೊರೊನಾ

By

Published : May 11, 2021, 8:59 PM IST

ಲಖನೌ (ಉತ್ತರ ಪ್ರದೇಶ): ಕೊರೊನಾ 2ನೇ ಅಲೆಯ ತೀವ್ರತೆ ನಿತ್ಯ ಹೆಚ್ಚುತಲೇ ಇದ್ದು, ಗ್ರಾಮೀಣ ಭಾಗಕ್ಕೂ ಹಬ್ಬಿದೆ. ಇದೀಗ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಇದೀಗ 4 ಲಕ್ಷಕ್ಕೂ ಅಧಿಕ ಶಂಕಿತ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸ್ಥಳೀಯ ಆಡಳಿತಕ್ಕೆ ತಲೆನೋವಾಗಿದೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಹೆಚ್ಚುತ್ತಿದ್ದ ವೇಳೆ ಗ್ರಾಮೀಣ ಭಾಗದಲ್ಲಿ ಪ್ರತೀ ಮನೆ ಮನೆ ತೆರಳಿ ಸರ್ವೆ ನಡೆಸಿದಾಗ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಮೇ.5ರಿಂದ ರಾಜ್ಯದಲ್ಲಿ ವಿಶೇಷ ಅಭಿಯಾನ ನಡೆಸಲಾಗಿದ್ದು, ಅದರಲ್ಲಿ ಕೆಮ್ಮು, ಶೀತ ಮತ್ತು ಜ್ವರ ಇತರ ಅನುಮಾನಾಸ್ಪದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಪತ್ತೆ ಮಾಡಲಾಗಿದೆ. ವರದಿಯಲ್ಲಿ 4 ಲಕ್ಷಕ್ಕೂ ಅಧಿಕ ಜನರಲ್ಲಿ ಈ ಲಕ್ಷಣ ಕಂಡು ಬಂದಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಹಿತಿ ನವನೀತ್ ಸೆಹಗಲ್ ಅವರ ಪ್ರಕಾರ, ಸುಮಾರು 97,000ಕ್ಕೂ ಅಧಿಕ ಗ್ರಾಮಗಳಲ್ಲಿ ಸರ್ವೆ ನಡೆಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲೂ 4,500 ಮಂದಿಗೆ ಕೊರೊನಾ ದೃಢವಾಗಿದೆ. ಇತ್ತ ಶಂಕಿತ ರ‍್ಯಾಪಿಡ್ ಟೆಸ್ಟ್ ನಡೆಸಲು ಸಹ ನಿರ್ಧರಿಸಲಾಗಿದ್ದು, ಗ್ರಾಮಸ್ಥರಿಗೆ ವೈದ್ಯಕೀಯ ಕಿಟ್​​​ಗಳನ್ನು ಸಹ ನೀಡಲಾಗುತ್ತಿದೆ.

ಇದಲ್ಲದೇ ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ರೋಗಿಗಳನ್ನು ಪ್ರತ್ಯೇಕಿಸುವ ಕಾರ್ಯ ಮಾಡಲಾಗುತ್ತಿದೆ.

ABOUT THE AUTHOR

...view details