ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ನಾಲ್ವರ ಸಾವು - ಕೇರಳದ ಅಂಬಲಪ್ಪುಳದಲ್ಲಿ ಬುಧವಾರ ಕಾರೊಂದು ಲಾರಿಗೆ ಡಿಕ್ಕಿ

ಕೇರಳದಲ್ಲಿ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರು ತಿರುವನಂತಪುರಂನ ನೆಡುಮಂಗಡದಿಂದ ನೆಡುಮಾಬಸ್ಸೆರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರನ್ನು ಶಿಜು (34), ಮುಧೀಶ್ ಲಾಲ್ (37), ಅಭಿರಾಗ್ (25), ಅಂಬಾಡಿ (12) ಎಂದು ಗುರುತಿಸಲಾಗಿದೆ.

Four killed, one injured in road accident near Alappuzha, kerala
ಭೀಕರ ರಸ್ತ ಅಪಘಾತ: ನಾಲ್ವರ ಸಾವು

By

Published : Apr 27, 2022, 9:26 AM IST

Updated : Apr 27, 2022, 9:36 AM IST

ತಿರುವನಂತಪುರಂ(ಕೇರಳ):ಇಲ್ಲಿನಅಂಬಲಪ್ಪುಳದಲ್ಲಿ ಬುಧವಾರ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದು, ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಪ್ರಯಾಣಿಕರು ತಿರುವನಂತಪುರಂನ ನೆಡುಮಂಗಡದಿಂದ ನೆಡುಮಾಬಸ್ಸೆರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರನ್ನು ಶಿಜು (34), ಮುಧೀಶ್ ಲಾಲ್ (37), ಅಭಿರಾಗ್ (25), ಅಂಬಾಡಿ (12) ಎಂದು ಗುರುತಿಸಲಾಗಿದೆ.

ಇದನ್ನು ಓದಿ:ಬೈಕ್​ ಸವಾರನ ರಕ್ಷಿಸಲು ಹೋಗಿ, ಪಲ್ಟಿಯಾದ ಬಸ್​: ಸ್ಥಳದಲ್ಲೇ 6 ಮಂದಿ ಸಾವು

Last Updated : Apr 27, 2022, 9:36 AM IST

ABOUT THE AUTHOR

...view details