ಬಿಹ್ತಾದಲ್ಲಿ ಗುಂಡಿನ ದಾಳಿ.. ನಾಲ್ವರು ಸಾವು, 9 ಮಂದಿಗೆ ಗಾಯ - ಬಹುಸುತ್ತಿನ ಗುಂಡಿನ ದಾಳಿ
ಮನೇರ್ ಡಿಯಾರಾ ಪ್ರದೇಶದಲ್ಲಿ ನಿನ್ನೆ ನಡೆದ ಬಹುಸುತ್ತಿನ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಬಿಹ್ತಾದಲ್ಲಿ ಗುಂಡಿನ ದಾಳಿ
ಬಿಹ್ತಾ (ಬಿಹಾರ): ಬಿಹ್ತಾದ ಮನೇರ್ ಡಿಯಾರಾ ಪ್ರದೇಶದಲ್ಲಿ ನಿನ್ನೆ ನಡೆದ ಬಹುಸುತ್ತಿನ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅಕ್ರಮ ಮರಳು ದಂಧೆ ವಿಚಾರವಾಗಿ ಎರಡು ಬಣಗಳ ನಡುವೆ ನಡೆದ ಜಗಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.