ಬಿಜಾಪುರ (ಛತ್ತೀಸ್‌ಗಢ): ನಿನ್ನೆ ತಡರಾತ್ರಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ದರ್ಭಾ ಶಿಬಿರದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಶಿಬಿರದ ಮೇಲೆ 10 ಕ್ಕೂ ಹೆಚ್ಚು BGL (ಬ್ಯಾರೆಲ್ ಗ್ರೆನೇಡ್ ಲಾಂಚರ್)ನಿಂದ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಯವರೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಜವಾನರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ನಕ್ಸಲರ ಭದ್ರಕೋಟೆ ಎಂದು ಪರಿಗಣಿಸಲಾದ ಕುಟ್ರು ಪ್ರದೇಶದ ದರ್ಭಾದಲ್ಲಿ ಸಿಎಎಫ್ 4 ಬೆಟಾಲಿಯನ್ ಕಾರ್ಯಾಚರಣೆ ಶಿಬಿರವನ್ನು ಸ್ಥಾಪಿಸಿದೆ. ಮಧ್ಯರಾತ್ರಿಯ ನಂತರ ನಕ್ಸಲರು ಪೊಲೀಸ್ ಶಿಬಿರವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ. ಶಿಬಿರದ ಮೇಲೆ ಬಿಜಿಎಲ್ನಿಂದ ದಾಳಿ ಮಾಡುವುದನ್ನು ಮುಂದುವರೆಸಿದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಮಲಗಿದ್ದ ಯೋಧರು ಸಹ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಪ್ರತ್ಯುತ್ತರ ನೀಡಿದರು.