ನವದೆಹಲಿ: ದೆಹಲಿ ಸೇರಿದಂತೆ ನಾಲ್ಕು ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಬಾಂಬೆ ಐಐಟಿಯ ಪ್ರಾಧ್ಯಾಪಕರಾಗಿದ್ದ ರಂಗನ್ ಬ್ಯಾನರ್ಜಿ ಅವರು ದೆಹಲಿ ಐಐಟಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೈಕ್ರೋಪ್ರೊಸೆಸರ್ 'ಶಕ್ತಿ'ಯನ್ನು ರೂಪಿಸಿದ ಪ್ರಾಧ್ಯಾಪಕ ಪ್ರೊ.ವಿ.ಕಾಮಕೋಟಿ ಅವರನ್ನು ಮದ್ರಾಸ್ ಐಐಟಿಗೆ, ಕಾನ್ಪುರ ಐಐಟಿಯ ಇಂಜಿನಿಯರಿಂಗ್ ಪ್ರೊಫೆಸರ್ ಲಕ್ಷ್ಮೀಧರ್ ಹೆಬ್ರಾ ಅವರನ್ನು ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.