ಕರ್ನಾಟಕ

karnataka

ETV Bharat / bharat

ರಾಜೌರಿಯಲ್ಲಿ ಬಾಂಬ್‌ ಸ್ಫೋಟ: ಬಿಜೆಪಿ ನಾಯಕನ ಕುಟುಂಬದ ನಾಲ್ವರಿಗೆ ಗಾಯ, 4 ವರ್ಷದ ಮಗು ಸಾವು - ಉಗ್ರರು

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಡೆಸಿರುವ ಬಾಂಬ್‌ ದಾಳಿಯಲ್ಲಿ ಬಿಜೆಪಿ ನಾಯಕ ಜಸ್ಬೀರ್‌ ಸಿಂಗ್‌ ಕುಟುಂಬದ ನಾಲ್ವರು ಗಾಯಗೊಂಡಿದ್ದು, ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

Four family members of BJP leader injured and one died in Rajouri explosion.
ರಾಜೌರಿಯಲ್ಲಿ ಬಾಂಬ್‌ ಸ್ಫೋಟ: ಬಿಜೆಪಿ ನಾಯಕನ ಕುಟುಂಬದ ನಾಲ್ವರಿಗೆ ಗಾಯ; ಓರ್ವನ ಸಾವು

By

Published : Aug 13, 2021, 1:59 AM IST

Updated : Aug 13, 2021, 2:12 PM IST

ರಾಜೌರಿ(ಜಮ್ಮು-ಕಾಶ್ಮೀರ): ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ರಾಜೌರಿಯಲ್ಲಿ ನಡೆದಿರುವ ಬಾಂಬ್‌ ಸ್ಫೋಟದಲ್ಲಿ ಬಿಜೆಪಿ ನಾಯಕನ ಕುಟುಂಬದ ನಾಲ್ವರು ಗಾಯಗೊಂಡಿದ್ದು, ಮಗುವೊಂದು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ರಾಜೌರಿ ಜಿಲ್ಲೆಯಲ್ಲಿರುವ ಬಿಜೆಪಿ ನಾಯಕ ಜಸ್ಬೀರ್‌ ಸಿಂಗ್‌ ನಿವಾಸದ ಬಳಿ ಈ ದುರಂತ ಸಂಭವಿಸಿದೆ. ಮನೆ ಮುಂಭಾಗ ಸಿಂಗ್‌ ಅವರ ಕುಟುಂಬ ಸದಸ್ಯರು ಕುಳಿತ್ತಿದ್ದಾಗ ಬಾಂಬ್‌ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಗಾಯಾಗಳುಗಳನ್ನು ರಾಜೌರಿ ಸಿವಿಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿದ ಭದ್ರಾಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ತೀವ್ರ ಶೋಧಕಾರ್ಯ ನಡೆಸುತ್ತಿವೆ.

Last Updated : Aug 13, 2021, 2:12 PM IST

For All Latest Updates

ABOUT THE AUTHOR

...view details