ಕರ್ನಾಟಕ

karnataka

ETV Bharat / bharat

ಕಾಲೇಜ್​ಗೆ​ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ನಿಗೂಢವಾಗಿ ನಾಪತ್ತೆ! - ಲಖಿಂಪುರ್​ ಖೇರಿ,

ಕಾಲೇಜ್​ಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನಡೆದಿದೆ.

Four college girls missing, Four college girls missing in Lakhimpur Kheri, Lakhimpur Kheri, Lakhimpur Kheri news, ನಾಲ್ಕು ಕಾಲೇಜ್​ ವಿದ್ಯಾರ್ಥಿನಿ ನಾಪತ್ತೆ, ಲಖಿಂಪುರ್​ ಖೇರಿಯಲ್ಲಿ ನಾಲ್ಕು ಕಾಲೇಜ್​ ವಿದ್ಯಾರ್ಥಿನಿ ನಾಪತ್ತೆ, ಲಖಿಂಪುರ್​ ಖೇರಿ, ಲಖಿಂಪುರ್​ ಖೇರಿ ಸುದ್ದಿ,
ಕಾಲೇಜ್​ ವಿದ್ಯಾರ್ಥಿನಿ ನಾಪತ್ತೆ

By

Published : Feb 23, 2021, 8:21 AM IST

ಲಖಿಂಪುರ ಖೇರಿ: ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೊಹಲ್ಲಾ ಹಿಂಡಾಯತ್​ ನಗರದಲ್ಲಿ ಕಂಡು ಬಂದಿದೆ.

ಹಿದಾಯತ್‌ನಗರದಲ್ಲಿ ವಾಸಿಸುತ್ತಿರುವ ಇಬ್ಬರ ಹೆಣ್ಣುಮಕ್ಕಳು, ಬಹದ್ದೂರ್‌ನಗರದ ವ್ಯಕ್ತಿಯ ಮಗಳು ಮತ್ತು ನಿರ್ಮಲ್‌ನಗರದ ವ್ಯಕ್ತಿಯ ಮಗಳು ಆರ್ಯ ಕನ್ಯಾ ಇಂಟರ್​ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಾಲ್ವರು ಸ್ನೇಹಿತರು ಶಾಲೆಗೆ ಬಂದು ವಾಪಸಾಗಲು ಸೈಕಲ್​ ಸ್ಟ್ಯಾಂಡ್​ ಬಳಿ ತೆರಳಿದರು. ಬಳಿಕ ಅಲ್ಲಿಂದ ನಾಲ್ವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕಾಲೇಜ್​ ವಿದ್ಯಾರ್ಥಿನಿಯು ನಾಪತ್ತೆ

ಕಾಲೇಜ್​ ಮುಗಿದ ಬಳಿಕವೂ ನಾಲ್ವರು ಹುಡುಗಿಯರು ಮನೆಗೆ ವಾಪಸಾಗದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜವಾಗಿಲ್ಲ. ಬಳಿಕ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ನಾಪತ್ತೆಯಾದ ಹುಡುಗಿಯರನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ನಗರದ ಶೋರೂಂವೊಂದರ ಸಿಸಿಟಿವಿಯಲ್ಲಿ ಕಾಣೆಯಾದ ಹುಡುಗಿಯರ ದೃಶ್ಯ ಸೆರೆಯಾಗಿದೆ. ಶಾಲೆಯ ಉಡುಪಿನಲ್ಲಿ ಅಲ್ಲ. ಹುಡುಗಿಯರು ಎಲ್ಲೋ ಬಟ್ಟೆ ಬದಲಾಯಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಲಕಿಯರ ಹುಡುಕಾಟದಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಬಾಲಕಿಯರನ್ನು ಪತ್ತೆ ಹಚ್ಚಲಾಗುವುದೆಂದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details