ಆಂಧ್ರಪ್ರದೇಶ: ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ನಿಜಾಂಪಟ್ನಂನ ಸಮುದ್ರದಲ್ಲಿ ದೋಣಿಯಲ್ಲಿದ್ದ ನಾಲ್ವರು ಮಕ್ಕಳು ಸಮುದ್ರಕ್ಕೆ ಬಿದ್ದಿದ್ದಾರೆ. ನಾಲ್ವರು ಮಕ್ಕಳ ಪೈಕಿ, ಮೂವರು ಸಾವನ್ನಪ್ಪಿದ್ದು, ಬಾಲಕನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ತೆನಾಲಿಯಲ್ಲಿ ಆಯೋಜನೆಗೊಂಡಿದ್ದ ಮದುವೆ ಸಮಾರಂಭಕ್ಕೆ ಸುಮಾರು 40 ಮಂದಿ ಸಂಬಂಧಿಕರು ಬಂದಿದ್ದರು. ವಿಹಾರಕ್ಕೆಂದು ನಿಜಾಂಪಟ್ನಂ ಬಂದರಿಗೆ ಬಂದಿದ್ದರು. ಬಂದರಿನಿಂದ ದೋಣಿಯಲ್ಲಿ ಸಮುದ್ರದಲ್ಲಿ ವಿಹಾರಕ್ಕೆ ತೆರಳಿದ್ದರು. ಸ್ವಲ್ಪ ಸಮಯದಲ್ಲೇ ದೋಣಿಗೆ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದರಿಂದ ದೋಣಿಯಲ್ಲಿದ್ದ ನಾಲ್ವರು ಮಕ್ಕಳು ಸಮುದ್ರಕ್ಕೆ ಬಿದ್ದು ಸಮುದ್ರದಲ್ಲಿ ಮುಳುಗಿದರು.