ಆರ್ರಾ(ಬಿಹಾರ) ಅರ್ರಾ ಸಮೀಪದ ಸೋನ್ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ಮುಳುಗಿ ಮೃತಪಟ್ಟಿರುವ ದಾರುಣ ಪ್ರಕರಣ ಅಜಿಮಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಕ್ಕಳನ್ನು ನೂರ್‌ಪುರ ಗ್ರಾಮದ ವೀರೇಂದ್ರ ಚೌಧರಿ( 12) ಅಮಿತ್ ಕುಮಾರ್ , ದಿವಂಗತ ರಾಮ್ ರಾಜ್ ಚೌಧರಿ( 8) ರೋಹಿತ್ ಕುಮಾರ್(10) ಶುಭಂ ಕುಮಾರ್ (10) ಎಂದು ಗುರುತಿಸಲಾಗಿದೆ. ಇದರಲ್ಲಿ ಇಬ್ಬರು ಮಕ್ಕಳು ಸೋದರ ಸಂಬಂಧಿಗಳಾಗಿದ್ದು, ಇನ್ನಿಬ್ಬರು ಅಕ್ಕಪಕ್ಕದ ಮನೆಯವರು ಎನ್ನಲಾಗಿದೆ.
ಪೋಷಕರ ಆಕ್ರಂದನ:ನ್ಯಾಯಾಧೀಶ ಚೌಧರಿ ಮತ್ತು ಅದೇ ಗ್ರಾಮದ ಬಜರಂಗಿ ಚೌಧರಿ ಎಂಬುವವರ 9 ವರ್ಷದ ಮಗ ರೋಹಿತ್ ಕುಮಾರ್. ಮೃತ ಶುಭಂ ಕುಮಾರ್ ಮತ್ತು ರೋಹಿತ್ ಕುಮಾರ್ ಇಬ್ಬರೂ ಸೋದರ ಸಂಬಂಧಿಗಳು. ನೀರಿನಲ್ಲಿ ಮುಳುಗಿ ಒಂದೇ ಗ್ರಾಮದ ನಾಲ್ವರು ಮಕ್ಕಳು ಸಾವಿಗೀಡಾಗಿರುವ ಘಟನೆ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಮಕ್ಕಳು ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಜಿಲ್ಲಾಡಳಿತ ತಂಡ ಪರಿಶೀಲನೆ: ನಾಲ್ವರು ಮಕ್ಕಳು ಸಾವಿಗೀಡಾದ ದಾರುಣ ಘಟನೆ ಬಳಿಕ, ಸ್ಥಳೀಯ ಜಿಲ್ಲಾಡಳಿತ ತಂಡ ದಳದೊಂದಿಗೆ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದೆ. ಸ್ಥಳೀಯ ಡೈವರ್‌ಗಳ ಸಹಾಯದಿಂದ ನೀರಿನಲ್ಲಿ ಕೊಚ್ಚಿಹೋದ ಎಲ್ಲ ಮಕ್ಕಳ ಮೃತದೇಹಗಳನ್ನು ಹೊರತೆಗೆದು, ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೋಷಕರ ಆರೋಪ: ಆರು ಮಕ್ಕಳು ಸ್ನಾನಕ್ಕೆ ತೆರಳಿದ್ದರು. ಅಕ್ರಮ ಮರಳುಗಾರಿಕೆ ಮಾಫಿಯಾಗಳು ಸೋನ್‌ನದಿಯಲ್ಲಿ ಬೃಹತ್ ಹೊಂಡಗಳನ್ನು ಕೊರೆದು ಸೇತುವೆ ನಿರ್ಮಿಸಿದ್ದಾರೆ. ಆಟದಲ್ಲಿ ತೊಡಗಿದ್ದ ಮಕ್ಕಳು ನೀರು ತುಂಬಿದ್ದ ಹೊಂಡಕ್ಕೆ ಜಾರಿಬಿದ್ದಿದ್ದಾರೆ. ಆಳಕ್ಕೆ ಮಕ್ಕಳು ಹೋಗಿದ್ದರಿಂದ ಮೇಲೆಯೂ ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಕ್ಕಳ ಸಾವಿಗೆ ಅಕ್ರಮ ಮರಳುಗಾರಿಕೆ ಮಾಫಿಯಾವೇ ಕಾರಣವಾಗಿದ್ದು, ಮರಳು ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ನೀರಲ್ಲಿ ಮುಳುಗಿ ಬಾಲಕ ಸಾವು: ಇಶಾ ಪೌಂಡೇಶನ್ ಆದಿಯೋಗಿ ಪ್ರತಿಮೆ ಬಳಿ ಹೋಗಿ ಹಿಂದಿರುಗುವಾಗ, ಕಲ್ಲು ಕ್ವಾರಿಯಲ್ಲಿ ಸ್ನೇಹಿತರ ಜೊತೆ ಈಜಾಡಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯು ತಾಲೂಕಿನ ಕೌರನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು ರಾಜಾಜಿನಗರದ ಮನೋಜ್ (17) ಮೃತ ಬಾಲಕ ಎಂದು ತಿಳಿದು ಬಂದಿದೆ. ನಾಲ್ವರು ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಇದ್ದಕ್ಕಿದಂತೆ ಮನೋಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ನೇಹಿತರ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ನೇಹಿತರು ಸಹ ಅವನನ್ನು ಕಾಪಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ 10 ಮಂದಿ ಬಾಲಕರು ಚಿಕ್ಕಬಳ್ಳಾಪುರಕ್ಕೆ ರೈಲಿನ ಮುಖಾಂತರ ಬಂದು ನಂತರ ಆಟೋದ ಮುಖಾಂತರ ಈಶಾ ಆದಿಯೋಗಿ ವೀಕ್ಷಿಸಿ ವಾಪಸ್ ಬರುವ ವೇಳೆ ಈಜಾಡಲು ಹೋಗಿದ್ದಾರೆ. ಆಗ ಬಾಲಕ ಸಾವನ್ನಪ್ಪಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಇಟ್ಟಿಗೆ ಭಟ್ಟಿಯಲ್ಲಿ ಉಸಿರುಗಟ್ಟಿ ಐವರು ಕಾರ್ಮಿಕರ ದಾರುಣ ಸಾವು..!