ಹೈದರಾಬಾದ್:ಕೇವಲ 72 ಸೆಂಟಿಮೀಟರ್ ಎತ್ತರವಿದ್ದ(2.5 ಅಡಿ) ವಿಶ್ವದ ಮಾಜಿ ಕುಬ್ಜ ಮಹಿಳೆ ಶನಿವಾರ ಅನಿರೀಕ್ಷಿತವಾಗಿ ತಮ್ಮ 33ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂಬ ಗಿನ್ನೆಸ್ ದಾಖಲೆ ಹೊಂದಿದ್ದ 33 ವರ್ಷದ ಎಲಿಫ್ ಕೊಕಾಮನ್(Elif Kocaman) ಟರ್ಕಿಯ ಕದರ್ಲಿ ಪಟ್ಟಣದಲ್ಲಿ ವಾಸವಾಗಿದ್ದಳು. ಆದರೆ, ಕಳೆದ ಮಂಗಳವಾರ ಅನಾರೋಗ್ಯಕ್ಕೀಡಾಗಿದ್ದ ಅವರನ್ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದ ಬಳಿಕ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಜೊತೆಗೆ ನ್ಯುಮೋನಿಯಾದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ. ವಿಶ್ವದ ಅತಿ ಕುಬ್ಜ ಯುವತಿ ಎಂಬ ದಾಖಲೆಗೆ ಪಾತ್ರವಾಗಿದ್ದ ಕೊಕಾಮನ್ 2010ರಲ್ಲಿ ಗಿನ್ನೆಸ್ ದಾಖಲೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿರಿ:ಒಳಗೆ ಸೇರಿದರೆ ಗುಂಡು.. ಹುಡುಗಿಯ ರಂಪಾಟ ಕಂಡು ಪೊಲೀಸರೇ ಬೆಚ್ಚಿಬಿದ್ದರು-Video
ಸದ್ಯ ಮಹಾರಾಷ್ಟ್ರದ ಜ್ಯೋತಿ ಆಮ್ಗೆ ವಿಶ್ವದ ಅತ್ಯಂತ ಕುಬ್ಜ ಮಹಿಳೆಯಾಗಿದ್ದು, ಇವರು ಕೇವಲ 63 ಸೆಂಟಿಮೀಟರ್ ಎತ್ತರವಿದ್ದಾರೆ.