ಜೈಪುರ, ರಾಜಸ್ಥಾನ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ ತಮ್ಮ 89ನೇ ವಯಸ್ಸಿನಲ್ಲಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.
1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಅವರು ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಕೂಡಾ ಆಗಿದ್ದರು. ಪಹಾಡಿಯಾ ನಿಧನದ ಸುದ್ದಿ ಕೇಳಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಧನದ ಬಗ್ಗೆ ತುಂಬಾ ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್ಓ ಹೊಸ ನೀತಿಯ ಪೂರ್ಣ ಮಾಹಿತಿ
ಕೋವಿಡ್ನಿಂದಾಗಿ ಪಹಾಡಿಯಾ ನಮ್ಮನ್ನು ತೊರೆದಿದ್ದು, ಮೊದಲಿನಿಂದಲೂ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು. ಅವರು ಇಲ್ಲವಾಗಿರುವುದರಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಪಹಾಡಿಯಾ ನಿಧನದಿಂದಾಗಿ ರಾಜಸ್ಥಾನ ರಾಜ್ಯ ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ಪಹಾಡಿಯಾಗೆ ಸಂತಾಪ ಸೂಚಿಸಲು ಗುರುವಾರ ಮಧ್ಯಾಹ್ನ 12 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದೆ.