ಜೈಪುರ(ರಾಜಸ್ಥಾನ):ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದೆ. ಪಕ್ಷದ ಉಸ್ತುವಾರಿ ವಹಿಸಿದ್ದ ಅಜಯ್ ಮಾಕನ್ ಅವರನ್ನು ಬದಲಿಸಿ, ಆ ಜಾಗಕ್ಕೆ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ್ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ಡಿಸಿಎಂ ಸಚಿನ್ ಪೈಲಟ್ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ವೇಳೆ ಶಾಸಕರು, ಮಂತ್ರಿಗಳು ಬಂಡೆದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಉಸ್ತುವಾರಿಯಾಗಿದ್ದ ಅಜಯ್ ಮಾಕನ್ ಸಂಧಾನಕ್ಕೆ ಶತಪ್ರಯತ್ನ ನಡೆಸಿದ್ದರು. ಆದರೆ, ಶಾಸಕರು, ಸಚಿವರು ಇದಕ್ಕೆ ಓಗೊಡಲಿಲ್ಲ. ಕೊನೆಗೆ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾಯಿತು.