ಕರ್ನಾಟಕ

karnataka

By

Published : Aug 12, 2021, 12:38 PM IST

ETV Bharat / bharat

ನಾನು ಯಾರನ್ನೂ ದೂಷಿಸುವುದಿಲ್ಲ, ಆದರೆ ಕಲಾಪ ನಡೆಯಬೇಕು: ಹೆಚ್.ಡಿ ದೇವೇಗೌಡ

ಸಂಸತ್ ಕಲಾಪದ ವೇಳೆ ನಡೆದ ಗದ್ದಲದ ಕುರಿತು ಮಾಜಿ ಪ್ರಧಾನಿ ಮತ್ತು ರಾಜ್ಯಸಭೆ ಸದಸ್ಯ ಹೆಚ್​.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Former PM HD Devegowda reaction about Ruckus in Parliament Session
ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ನವದೆಹಲಿ: ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ. ಆದರೆ, ಸಂಸತ್‌ ಕಲಾಪ ನಡೆಯಬೇಕು ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹೇಳಿದ್ದಾರೆ.

ಪೆಗಾಸಸ್ ಸ್ಪೈವೇರ್​ ವಿಚಾರಕ್ಕೆ ಸಂಸತ್ ಕಲಾಪ ಬಲಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮುಂಬರುವ ಅಧಿವೇಶನದಲ್ಲಿ ಸಂಸತ್ತಿನ ಕಲಾಪಗಳನ್ನು ನಡೆಸಲು ಎರಡೂ ಕಡೆಯ (ಆಡಳಿತ- ಪ್ರತಿಪಕ್ಷ) ಎಲ್ಲಾ ಹಿರಿಯ ನಾಯಕರು ಒಟ್ಟಾಗಬೇಕು ಎಂದಿದ್ದಾರೆ.

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಪೆಗಾಸಸ್ ಸ್ಪೈವೇರ್ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಆರಂಭದಿಂದಲೂ ಗದ್ದಲ ಸೃಷ್ಟಿಸಿದ್ದರಿಂದ ಸಂಸತ್​ನ ಮುಂಗಾರು ಅಧಿವೇಶನ ನಿಗದಿತ ಅವಧಿಗಿಂತ ಎರಡು ದಿನ ಮುಂಚೆಯೇ ಮುಕ್ತಾಯಗೊಂಡಿದೆ.

ಇದನ್ನೂಓದಿ: ಸಂಸತ್​ ಭವನದಿಂದ ವಿಜಯ್ ಚೌಕ್​ವರೆಗೆ ಪ್ರತಿಪಕ್ಷ ನಾಯಕರಿಂದ ಕಾಲ್ನಡಿಗೆ: ಕೇಂದ್ರದ ವಿರುದ್ಧ ಆಕ್ರೋಶ

ಮಂಗಳವಾರ ಮೇಲ್ಮನೆಯಲ್ಲಿ ಪೆಗಾಸಸ್ ವಿಚಾರವಾಗಿ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು. ಈ ವೇಳೆ ವರದಿಗಾರರ ಟೇಬಲ್ ಮೇಲೆ ಹತ್ತಿದ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಾಜ್ವಾ ಕಡತಗಳನ್ನು ಸಭಾಪತಿ ಪೀಠದತ್ತ ಎಸೆದರು. ಈ ವೇಳೆ ಪೀಠದಲ್ಲಿ ಸಭಾಪತಿ ಇರಲಿಲ್ಲ.

ABOUT THE AUTHOR

...view details