ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: 2019ರ Miss Kerala ಅನ್ಸಿ, Runner up ಅಂಜನಾ ಸಾವು - 2019 miss kerala

ಮಿಸ್ ಕೇರಳ- 2019 ಹಾಗೂ ರನ್ನರ್ ಅಪ್ ಇಬ್ಬರೂ ಕೊಚ್ಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅನ್ಸಿ ಹಾಗೂ ಅಂಜನಾ
ಅನ್ಸಿ ಹಾಗೂ ಅಂಜನಾ

By

Published : Nov 1, 2021, 10:31 AM IST

ಕೊಚ್ಚಿ (ಕೇರಳ):2019ರಲ್ಲಿ ಮಿಸ್ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ ಅನ್ಸಿ ಕಬೀರ್ (24) ಮತ್ತು ಅದೇ ಸ್ಫರ್ದೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತ್ರಿಶೂರ್​ನಿಂದ ಅನ್ಸಿ ಹಾಗೂ ಅಂಜನಾ ಪ್ರಯಾಣಿಸುತ್ತಿದ್ದ ಕಾರು ತಡರಾತ್ರಿ ಕೊಚ್ಚಿಯ ವೈಟಿಲ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಗುದ್ದಿದೆ.

ಇದನ್ನೂ ಓದಿ: ನಟ ಪುನೀತ್ ಓದಿಸುತ್ತಿದ್ದ 1800 ಮಕ್ಕಳ ಜವಾಬ್ದಾರಿ ಹೊರುವುದಾಗಿ ಘೋಷಿಸಿದ ತಮಿಳು ನಟ ವಿಶಾಲ್

ಕಾರಿನಲ್ಲಿ ಒಟ್ಟು ನಾಲ್ವರಿದ್ದರು. ಅನ್ಸಿ ಹಾಗೂ ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ಮಾತ್ರ ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.

ABOUT THE AUTHOR

...view details