ಕರ್ನಾಟಕ

karnataka

ETV Bharat / bharat

ನಾನು ದಾಳಿಗೆ ಹೆದರುವುದಿಲ್ಲ ಎಂದ ಉದಯ್​ ಸಾಮಂತ್​: ಶಾಂತಿ ಕಾಪಾಡಲು ಸಿಎಂ ಶಿಂದೆ ಸೂಚನೆ - ಕಾರು ದಾಳಿ ಬಗ್ಗೆ ಸಿಎಂ ಏಕನಾಥ್​ ಶಿಂದೆ ಹೇಳಿಕೆ

ತಮ್ಮ ಕಾರಿನ ಮೇಲೆ ದಾಳಿ ಮಾಡಿದ ಶಿವಸೈನಿಕರ ವಿರುದ್ಧ ಮಾಜಿ ಸಚಿವ ಉದಯ್​ ಸಾಮಂತ್​ ಕಿಡಿಕಾರಿದ್ದಾರೆ. ಇದೊಂದು ಹೇಡಿತನದ ಕೃತ್ಯವಾಗಿದೆ ಎಂದರೆ, ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಿ ಎಂದು ಸಿಎಂ ಏಕನಾಥ್ ಶಿಂದೆ ಹೇಳಿದ್ದಾರೆ.

former-minister-uday-samanth
Etv Bharatಶಾಂತಿ ಕಾಪಾಡಲು ಸಿಎಂ ಶಿಂದೆ ಸೂಚನೆ

By

Published : Aug 3, 2022, 11:23 AM IST

ಪುಣೆ:ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡ ಕಾರಣಕ್ಕಾಗಿ ಉದ್ಧವ್​ ಠಾಕ್ರೆ ಬಳಗದ ಶಿವಸೈನಿಕರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದರ ವಿರುದ್ಧ ಮಾಜಿ ಸಚಿವ ಉದಯ್ ಸಾಮಂತ್ ಕಿಡಿಕಾರಿದ್ದಾರೆ. ನಾನು ಎಲ್ಲಿಯೂ ಓಡಿಹೋಗುವುದಿಲ್ಲ. ನಿಮ್ಮ ಈ ಉದ್ಧಟತನಕ್ಕೆ ಹೆದರುವುದಿಲ್ಲ. ನನ್ನ ಸಹನೆಯನ್ನು ಪರೀಕ್ಷೆ ಮಾಡಬೇಡಿ ಎಂದು ಹೇಳಿದರು.

ಇಂತಹ ಹೇಡಿ ಕೃತ್ಯದಿಂದ ಹೆದರುತ್ತೇವೆ ಎಂಬುದು ಮೂರ್ಖತನ. ದಾಳಿಗೆ ನಮ್ಮವರು ಹೆದರಿ ಏಕನಾಥ್ ಶಿಂಧೆ ಅವರನ್ನು ಬಿಟ್ಟು ಹೋಗುತ್ತಾರೆ ಎಂದು ನೀವು ಭಾವಿಸಿದರೆ ಅದು ತಪ್ಪು. ಈ ದಾಳಿಯು ನಮ್ಮನ್ನು ಇನ್ನಷ್ಟು ಗಟ್ಟಿ ಮಾಡಲಿದೆ. ಇಂತಹ ಘಟನೆಗಳು ರಾಜ್ಯ ರಾಜಕೀಯ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಶಾಂತಿ ಕಾಪಾಡಲು ಮನವಿ: ಈ ದಾಳಿ ಹೇಡಿತನದ ಕೃತ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ನಿನ್ನೆ ರಾತ್ರಿ ಪುಣೆಗೆ ಭೇಟಿ ನೀಡಿದ್ದ ಸಿಎಂ ಏಕನಾಥ್​ ಶಿಂದೆ ಅವರನ್ನು ಭೇಟಿ ಮಾಡಿದ ಬಳಿಕ ಕಾಟ್ರಾಜ್​ ಸಿಗ್ನಲ್​​ನಲ್ಲಿ ಉದಯ್​ ಸಾಮಂತ್​ ಅವರ ಕಾರಿನ ಮೇಲೆ ಕೆಲ ಶಿವಸೈನಿಕರು ದಾಳಿ ಮಾಡಿದ್ದರು. ಇದರಿಂದ ಕಾರಿನ ಗಾಜು ಒಡೆದಿದೆ. ಈ ಬಗ್ಗೆ ಕೊತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಓದಿ:ಶಾಲೆಯಿಂದ ಬರುತ್ತಿರುವಾಗ ಕೆರೆಯಲ್ಲಿ ಈಜಲು ಹೋಗಿ ಮೂರು ಬಾಲಕರು ನೀರುಪಾಲು!

ABOUT THE AUTHOR

...view details