ಜಬಲ್ಪುರ (ಮಧ್ಯಪ್ರದೇಶ): ನಗರದ 40 ಕಿಲೋ ಮೀಟರ್ ದೂರದಲ್ಲಿರುವ ಬಾಗ್ರಾಜಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬನ ಕೈಕಾಲುಗಳನ್ನು ಹಲವಾರು ವರ್ಷಗಳಿಂದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ. ಪೋಷಕರು ಕಡುಬಡವರಾಗಿರುವುದರಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ, ಅನೇಕ ಬಾರಿ ಜಿಲ್ಲಾಡಳಿತ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಮಾನಸಿಕ ಅಸ್ವಸ್ಥನ ಕೈ - ಕಾಲು ಕಟ್ಟಿ ಹಾಕಿದ ಕುಟುಂಬ ಯುವಕನ ಹೆಸರು ರಾಜೇಶ್ ಚಕ್ರವರ್ತಿ. ಸುಮಾರು 10 ವರ್ಷಗಳಿದ್ದಾಗ ಆತನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಈ ರೀತಿಯಾಗಿದ್ದಾನೆ ಎಂದು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ. ಮೂರು ತಿಂಗಳ ಹಿಂದೆ ಪೋಷಕರು ಮೃತಪಟ್ಟಿದ್ದು, ಸಹೋದರ, ಸಹೋದರಿಯರು ಈತನ ಆರೈಕೆ ಮಾಡುತ್ತಿದ್ದಾರೆ.
ಇದೀಗ ಈ ವಿಚಾರ ಮಾಜಿ ಸಚಿವ ಲಖನ್ ಘಂಘೋರಿಯಾ ಗಮನಕ್ಕೆ ಬಂದಿದ್ದು, ಯುವಕನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರು, ಇದೊಂದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಅವನು ಹುಟ್ಟುತ್ತಲೇ ಅನಾರೋಗ್ಯ ಪೀಡಿತನಾಗಿರಲಿಲ್ಲ. ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಂಡ ಯಾವುದೋ ರೋಗದಿಂದ ಈ ರೀತಿಯಾಗಿದ್ದಾನಷ್ಟೇ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯುವಕನಿಗೆ ಚಿಕಿತ್ಸೆ ಕೊಡಿಸಲು ಸಹಕರಿಸುತ್ತಿವೆ. ರಾಜೇಶ್ ಚಕ್ರವರ್ತಿ ಮೊದಲಿನಂತಾಗಬಹುದು ಎಂದು ಮಾಜಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಬಲಿಯಾಗಿ 9.20 ಲಕ್ಷ ರೂ. ಕಳೆದುಕೊಂಡ ಗುತ್ತಿಗೆದಾರ