ಆಗ್ರಾ: ಯುಪಿ ಮಾಜಿ ಸಚಿವ ಚೌಧರಿ ಬಶೀರ್ ಅವರನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗೆ ಅಟ್ಟಲಾಗಿದೆ. ಆತ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಾಜಿ ಸಚಿವರು ಜೈಲಿಗೆ ಹೋದ ನಂತರ, ಅವರ 4ನೇ ಪತ್ನಿ ನಗ್ಮಾ ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.
31 ಜುಲೈ, 2021ರಂದು ಅವರ 4ನೇ ಪತ್ನಿ ನಗ್ಮಾ ಅವರು ಮಂಟೋಲಾ ಪೊಲೀಸ್ ಠಾಣೆಯಲ್ಲಿ ಚೌಧರಿ ಬಶೀರ್ ವಿರುದ್ಧ ತ್ರಿವಳಿ ತಲಾಖ್ ಪ್ರಕರಣ ದಾಖಲಿಸಿದ್ದರು. ಈಗ ಪತಿ ಚೌಧರಿ ಬಶೀರ್ ಕಂಬಿಗಳ ಹಿಂದೆ ಹೋಗಿರುವುದಕ್ಕೆ ನಗ್ಮಾ ಖುಷಿಪಟ್ಟಿದ್ದಾರೆ.
ಆರು ಮದುವೆಯಾಗಿದ್ದ ಮಾಜಿ ಸಚಿವನನ್ನು ಜೈಲಿಗಟ್ಟಿದ 4ನೇ ಹೆಂಡತಿ ಆಕೆ ಗುರುವಾರ ತಡರಾತ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗೆ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಗೆ ನಗ್ಮಾ ಧನ್ಯವಾದ ಸಲ್ಲಿಸಿದ್ದಾರೆ. ಈವರೆಗೆ ನನ್ನ ಮಕ್ಕಳಿಗೆ ನ್ಯಾಯ ಸಿಕ್ಕಿರಲಿಲ್ಲ. ನೀವೆಲ್ಲರೂ ನನ್ನನ್ನು ಈ ರೀತಿ ಬೆಂಬಲಿಸಿ ಮತ್ತು ನನಗೆ ಸರಿಯಾದ ನ್ಯಾಯ ನೀಡಿದ್ದೀರಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
18 ವರ್ಷಗಳಲ್ಲಿ ಬಶೀರ್ ಆರು ಮದುವೆ ಆಗಿದ್ದಾರೆ. ಚೌಧರಿ ಬಶೀರ್ 2003ರಲ್ಲಿ ಸಲೆಂಪುರ್ ವಿಧಾನಸಭೆಯ ಶಾಸಕಿ ಗಜಾಲಾ ಅವರನ್ನು ಪ್ರೇಮ ವಿವಾಹವಾಗಿದ್ದರು. ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮತ್ತು 2005ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇದಾದ ನಂತರ ಬಶೀರ್ ಹಿಂದೂ ಹುಡುಗಿಯಾದ ಗಿನ್ನಿ ಕಕ್ಕರ್ ಎಂಬ ಯುವತಿಯನ್ನು ವಿವಾಹವಾದರು.
ಆ ಸಂಬಂಧವೂ ಸಹ ಮುರಿದು ಬಿತ್ತು. ಇದಾದ ನಂತರ ಬಶೀರ್ ತರಣಂ ಎಂಬುವರ ಜೊತೆ 3ನೇ ಮದುವೆಯಾದರು. ಹಾಗೆ 2013ರಲ್ಲಿ ಅವರು ನಗ್ಮಾ ಜೊತೆ 4ನೇ ಮದುವೆ ಆದರು. ಇದಾದ ನಂತರ 5ನೇ ಮದುವೆ ಆಗಿದ್ದಲ್ಲದೆ, ಬಶೀರ್ 21 ಜುಲೈ 2021ರಂದು ಶಾಹಿಸ್ತಾಳೊಂದಿಗೆ 6ನೇ ವಿವಾಹವನ್ನು ಮಾಡಿಕೊಂಡಿದ್ದರು.