ವಿಶಾಖಪಟ್ಟಣಂ(ಆಂಧ್ರ ಪ್ರದೇಶ):ಆಂಧ್ರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಟಿಡಿಪಿ ಮತ್ತು ವೈಎಸ್ಆರ್ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಇಂದು ಬೆಳಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಚಂದ್ರಬಾಬು ನಾಯ್ಡು ಅವರನ್ನು ವಿಶಾಖಪಟ್ಟಣಕ್ಕೆ ಕರೆದೊಯ್ಯಲಾಯಿತು. ಇವರ ಬಂಧನದ ಬೆನ್ನಲ್ಲೇ ವಿಶಾಖದಲ್ಲಿ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರ ಬಂಧನ ಸಹ ಆಗಿದೆ.
ಏನಿದು ಪ್ರಕರಣ: ಇಂದು ಬೆಳಗ್ಗೆ 6 ಗಂಟೆ ಸುಮಾರು ನಂದ್ಯಾಲದ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ನಿಂದ ಕೆಳಗಿಳಿದಾಗ ಪೊಲೀಸರು ಅವರೊಂದಿಗೆ ಮಾತುಕತೆ ನಡೆಸಿ ವಶಕ್ಕೆ ಪಡೆದರು. ಈ ವೇಳೆ ಮಾನವ ಹಕ್ಕುಗಳನ್ನು ಏಕೆ ಉಲ್ಲಂಘಿಸಲಾಗುತ್ತಿದೆ ಎಂದು ಚಂದ್ರಬಾಬು ಪ್ರಶ್ನಿಸಿದ ಅವರು ನಾನು ತಪ್ಪು ಮಾಡಿದರೆ ರಸ್ತೆಯಲ್ಲೇ ನೇಣು ಹಾಕಿ. ಯಾವ ಕಾನೂನಿನ ಅಡಿಯಲ್ಲಿ ನನ್ನನ್ನು ಬಂಧಿಸುತ್ತೀರಿ. ಮೂಲಭೂತ ಸಾಕ್ಷ್ಯಗಳಿಲ್ಲದೆ ನನ್ನನ್ನು ಹೇಗೆ ಬಂಧಿಸುತ್ತೀರಿ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ನಾವು ಹೈಕೋರ್ಟ್‌ಗೆ ಪ್ರಾಥಮಿಕ ಸಾಕ್ಷ್ಯವನ್ನು ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಚಂದ್ರಬಾಬು ಪರ ವಕೀಲರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ವಕೀಲರು ಪೊಲೀಸರಿಗೆ ಸಾಕ್ಷ್ಯವನ್ನು ತೋರಿಸುವಂತೆ ಕೇಳಿದರು. ರಿಮಾಂಡ್ ವರದಿಯಲ್ಲಿ ಎಲ್ಲವೂ ಇದೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ನಮ್ಮನ್ನು ಸುತ್ತುವರಿದು ಬೆದರಿಕೆ ಹಾಕುವುದು ಸರಿಯಲ್ಲ. ನಾವು ವಿಚಲಿತರಾಗಿಲ್ಲ, ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದು ಚಂದ್ರಬಾಬು ಹೇಳಿದರು. ಚಂದ್ರಬಾಬು ಅವರನ್ನು ಬಂಧಿಸಿರುವುದು ಕಾನೂನು ಬಾಹಿರ ಎನ್ನುತ್ತಾರೆ ವಕೀಲರು.