ಕರ್ನಾಟಕ

karnataka

ETV Bharat / bharat

ಕೇರಳದ ಹಿರಿಯ ರಾಜಕಾರಣಿ ಆರ್.ಬಾಲಕೃಷ್ಣ ಪಿಳ್ಳೈ ನಿಧನ - ಕೇರಳ

ಕೇರಳ ಹಿರಿಯ ರಾಜಕಾರಣಿ ಆರ್.ಬಾಲಕೃಷ್ಣ ಪಿಳ್ಳೈ ಅವರು ಕೊಟ್ಟಾರಕರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1977 ರಿಂದ 2006ರವರೆಗೆ ಸತತವಾಗಿ ಕೊಟ್ಟಾರಕರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಇವರು, ಕೇರಳ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

R Balakrishna
ಆರ್.ಬಾಲಕೃಷ್ಣ ಪಿಳ್ಳೈ

By

Published : May 3, 2021, 9:59 AM IST

ಕೊಲ್ಲಂ: ಕೇರಳ ಕಾಂಗ್ರೆಸ್ (ಬಿ)ಯ ವರಿಷ್ಠ ನಾಯಕ ಮತ್ತು ಹಿರಿಯ ರಾಜಕಾರಣಿ ಆರ್.ಬಾಲಕೃಷ್ಣ ಪಿಳ್ಳೈ ಅವರು ಇಂದು ಬೆಳಿಗ್ಗೆ ಕೊಟ್ಟಾರಕರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

1977 ರಿಂದ 2006ರವರೆಗೆ ಸತತವಾಗಿ ಕೊಟ್ಟಾರಕರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗುತ್ತಿದ್ದ ಇವರು ಕೇರಳ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಕೇರಳ ಕಾಂಗ್ರೆಸ್ ಪಕ್ಷದ ಸಂಸ್ಥಾಪಕರಲ್ಲಿ ಇವರೂ ಒಬ್ಬರಾಗಿದ್ದರು. ಸರ್ಕಾರ ಪ್ರಧಾನ ಕಾರ್ಯದರ್ಶಿ ಕಾರ್ಯ ನಿರ್ವಹಿಸಿದ ಪಿಳ್ಳೈ, ಅಬಕಾರಿ, ಸಾರಿಗೆ ಮತ್ತು ಇಂಧನ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ಚಾಂಪಿಯನ್‌ ದೀದಿ ಸೋತರೂ ಬಂಗಾಳದ ಮುಖ್ಯಮಂತ್ರಿ: ಹೇಗೆ ಗೊತ್ತೇ?

ಬಾಲಕೃಷ್ಣ ಪಿಳ್ಳೈ ಅವರು ಮಾರ್ಚ್ 8, 1935 ರಂದು ಕೊಟ್ಟಾರಕರ ವಾಲಕೋಂನಲ್ಲಿ ರಾಮನ್ ಪಿಳ್ಳೈ ಮತ್ತು ಕಾರ್ತಿಯಾನಿಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಇವರ ಮಗ ಕೆ.ಬಿ ಗಣೇಶ್ ಕುಮಾರ್ ಚಲನಚಿತ್ರ ನಟರಾಗಿದ್ದು, ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಗಣೇಶ್ ಅವರು ಪತ್ತನಪುರಂ ಕ್ಷೇತ್ರದ ಶಾಸಕರಾಗಿದ್ದಾರೆ.

ABOUT THE AUTHOR

...view details