ದೆಹಲಿ:ಮಾಜಿ ಕೇಂದ್ರ ಸಚಿವ ಮತ್ತು ಜನತಾದಳ (ಯುನೈಟೆಡ್) ಮಾಜಿ ಅಧ್ಯಕ್ಷ ರಾಮಚಂದ್ರ ಪ್ರಸಾದ್ ಸಿಂಗ್ ಗುರುವಾರ ಬಿಜೆಪಿ ಸೇರಲಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಉಚ್ಚಾಟಿತ ಮುಖಂಡ ಬಂಡಾಯವೆದ್ದಿದ್ದು, ಕೇಸರಿ ಪಕ್ಷ ಸೇರಲಿದ್ದಾರೆ.
ಇದನ್ನೂ ಓದಿ:ಸಮೀಕ್ಷೆಗಳು ಉಲ್ಟಾ ಆಗಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಬೊಮ್ಮಾಯಿ
ರಾಮಚಂದ್ರ ಪ್ರಸಾದ್ ಸಿಂಗ್ ಕಳೆದ ವರ್ಷ ಮಾಧ್ಯಮ ಸಂವಾದದಲ್ಲಿ ಬಿಜೆಪಿ ಸೇರುವ ಸುಳಿವು ನೀಡಿದ್ದರು. ಆದರೂ ಜೆಡಿಯುನಿಂದ ಹೊರ ಬಂದಿರಲಿಲ್ಲ. ಬಳಿಕ ಪಕ್ಷ ತ್ಯಜಿಸಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಇದನ್ನೂ ಓದಿ:ರಾಜಸ್ಥಾನದ ತಮ್ಮದೇ ಸರ್ಕಾರದ ವಿರುದ್ಧ 'ಜನಸಂಘರ್ಷ ಯಾತ್ರೆ'ಗಿಳಿದ ಸಚಿನ್ ಪೈಲಟ್
ಆರ್‌ಸಿಪಿ ಸಿಂಗ್ ಜೆಡಿಯುನಿಂದ ಹೊರಬಂದ ನಂತರ ತಮ್ಮದೇ ಆದ ಪಕ್ಷ ರಚಿಸಲು ಚಿಂತಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ''ಪಕ್ಷವು ಅವರಿಗೆ ಜವಾಬ್ದಾರಿಯುತ ಸ್ಥಾನಗಳನ್ನು ನೀಡಿದ್ದರೂ ಅವರು ತೀವ್ರ ಗೊಂದಲಕ್ಕೀಡಾಗಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.