ಕರ್ನಾಟಕ

karnataka

ETV Bharat / bharat

ಕ್ರಯೋಜೆನಿಕ್ ತಂತ್ರಜ್ಞಾನದ ಬಗ್ಗೆ ಇಸ್ರೋ ಮಾಜಿ ವಿಜ್ಞಾನಿ ಹೇಳೋದಿಷ್ಟು!

ಗಗನ​ಯಾನ ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಇದಕ್ಕೆ ಅಗತ್ಯವಿರುವ ಕ್ರಯೋಜೆನಿಕ್ ಇಂಜಿನ್​​ ತಂತ್ರಜ್ಞಾನವನ್ನು ಇಸ್ರೋದ ಮಾಜಿ ವಿಜ್ಞಾನಿ ಎನ್.ಕೆ.ಗುಪ್ತಾ ಹಾಗೂ ಅವರ ತಂಡ ಅಭಿವೃದ್ಧಿಪಡಿಸಿದೆ. ಈ ಕುರಿತಂತೆ ಈಟಿವಿ ಭಾರತದೊಂದಿಗೆ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ.

Etv bharat interview with Former ISRO scientist NK Gupta
ಮಾಜಿ ಇಸ್ರೋ ವಿಜ್ಞಾನಿ ಎನ್‌ಕೆ ಗುಪ್ತಾ ಅವರೊಂದಿಗೆ ಈಟಿವಿ ಭಾರತ ಸಂದರ್ಶನ

By

Published : Dec 11, 2021, 10:36 PM IST

Updated : Dec 11, 2021, 10:56 PM IST

ಸೂರತ್(ಗುಜರಾತ್​) :ಚಂದ್ರಯಾನ -2 ರ ನಂತರ ಗಗನ​ಯಾನ​​ ಇಸ್ರೋದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕಾಗಿ ಭಾರತವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇಸ್ರೋ ಮಾಜಿ ವಿಜ್ಞಾನಿ ಎನ್​ಕೆ ಗುಪ್ತಾ ಜೊತೆ ಈಟಿವಿ ಭಾರತ ಸಂದರ್ಶನ

ಇಸ್ರೋ 2022ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನ ಮಿಷನ್​ ಪ್ರಾರಂಭಿಸಲಿದ್ದು, ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಮೊದಲು ಯೋಜನೆಗೆ ಅಗತ್ಯವಾದ ಇಂಜಿನ್​​ ತಂತ್ರಜ್ಞಾನವನ್ನು ರಷ್ಯಾ ನೀಡಬೇಕಿತ್ತು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಭಾರತಕ್ಕೆ ಈ ತಂತ್ರಜ್ಞಾನ ನೀಡಿರಲಿಲ್ಲ.

ಬಳಿಕ ಕ್ರಯೋಜೆನಿಕ್ ಇಂಜಿನ್​​ ತಂತ್ರಜ್ಞಾನವನ್ನು ಇಸ್ರೋದ ಮಾಜಿ ವಿಜ್ಞಾನಿ ಎನ್.ಕೆ.ಗುಪ್ತಾ ಹಾಗೂ ಅವರ ತಂಡ ಅಭಿವೃದ್ಧಿಪಡಿಸಿದೆ. ವಿಶ್ವದ ಅನೇಕ ದೇಶಗಳು ಕ್ರಯೋಜೆನಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಇದೀಗ ಭಾರತವು ಅದರಲ್ಲಿ ಸ್ಥಾನ ಪಡೆದಿದೆ.

ಇನ್ನು ಗಗನ​ಯಾನ ಯೋಜನೆ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನದ ಕುರಿತಂತೆ ಇಸ್ರೋದ ಮಾಜಿ ವಿಜ್ಞಾನಿ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನದ ಪ್ರಾಜೆಕ್ಟ್ ಹೆಡ್ ಎನ್.ಕೆ.ಗುಪ್ತಾ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವರ್ಷದ ನಂತರ ಮನೆಯತ್ತ ಮುಖ ಮಾಡಿದ ಅನ್ನದಾತರು.. ವಿಮಾನದ ಮೂಲಕ ಹೂವುಗಳ ಸುರಿಮಳೆ!

Last Updated : Dec 11, 2021, 10:56 PM IST

For All Latest Updates

TAGGED:

ABOUT THE AUTHOR

...view details