ಮಧ್ಯಪ್ರದೇಶ : ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಮಾಜಿ ಅಧ್ಯಕ್ಷ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಐಐಟಿ ಇಂದೋರ್‌ನ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಡಾ.ಕೆ.ಶಿವನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಚಂದ್ರನ 'ಶಿವಶಕ್ತಿ ಬಿಂದು'ವಿನಲ್ಲಿ ಚಂದ್ರಯಾನ-3 ನೌಕೆ ಇಳಿಯುವ ಒಂದು ದಿನ ಮೊದಲು ನೇಮಕಾತಿ ನಡೆದಿದೆ. ಡಾ.ಶಿವನ್ ನೇಮಕಾತಿಯೊಂದಿಗೆ ಪ್ರೊ.ದೀಪಕ್ ಬಿ. ಗೇಟ್ ಅವರು ಕರ್ತವ್ಯದಿಂದ ನಿರ್ಗಮಿಸಲಿದ್ದಾರೆ.
ಐಐಟಿ ಇಂದೋರ್ ನಿರ್ದೇಶಕ ಪ್ರೊ.ಡಾ.ಕೆ.ಜೋಶಿ ಮಾತನಾಡಿ, "ಈ ವರ್ಷ ಬಾಹ್ಯಾಕಾಶ ವಿಜ್ಞಾನದಲ್ಲಿ ಬಿ.ಎಸ್ಸಿ ಮತ್ತು ಇಂಜಿನಿಯರಿಂಗ್ ಟೆಕ್ ಪ್ರೋಗ್ರಾಂ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಐಐಟಿ ಇಂದೋರ್‌ನಲ್ಲಿ ಮಾತ್ರ ಲಭ್ಯವಿರುವ ವಿಶಿಷ್ಟ ಕಾರ್ಯಕ್ರಮ" ಎಂದರು.
ಇದೇ ವೇಳೆ, "ನಾವು ಈಗಾಗಲೇ ಖಗೋಳಶಾಸ್ತ್ರ, ಆಸ್ಟ್ರೋಫಿಸಿಕ್ಸ್ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ 2016ರಿಂದ ಎಂ.ಟೆಕ್ ಪ್ರಾರಂಭಿಸಿದ್ದೇವೆ. ಸಂಸ್ಥೆಯಲ್ಲಿ ಪಿಹೆಚ್ಡಿ ಕಾರ್ಯಕ್ರಮ ಆರಂಭಿಸಿದ್ದ ನನಗೆ ಖಚಿತವಾಗಿ ಡಾ.ಕೆ.ಶಿವನ್ ಮಾರ್ಗದರ್ಶನದಲ್ಲಿ, ಸಂಸ್ಥೆಯು ಹೊಸ ಎತ್ತರಕ್ಕೇರುವ ವಿಶ್ವಾಸವಿದೆ. ಬಾಹ್ಯಾಕಾಶ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಈವರೆಗೆ ಅನ್ವೇಷಿಸದ ಪ್ರದೇಶದಲ್ಲಿ ಕೆಲಸ ಮಾಡಲು ಮತ್ತು ದೇಶದ ಬಾಹ್ಯಾಕಾಶ ಯೋಜನೆಗೆ ಕೆ.ಶಿವನ್ ಅವರು ಮತ್ತಷ್ಟು ಕೊಡುಗೆ ನೀಡಲಿದ್ದಾರೆ" ಎಂದು ಹೇಳಿದರು.